ಕಚ್ಚಾತೈಲ ಗಗನನ ಮುಖಿ : ಬ್ಯಾರೆಲ್‌ಗೆ 120 ಡಾಲರ್‌ಗೇರಿಕೆ
ಶಿಕಾಗೋ: ತೀವ್ರಗೊಂಡಿರುವ ಇರಾನ್ ಕದನವು ತೈಲ ಹಾಗೂ ಹಣಕಾಸು ಮಾರುಕಟ್ಟೆಗಳನ್ನು ದಂಗುಬಡಿಸಿದ್ದು, ಸೋಮವಾರ ತೈಲ ಬೆಲೆಗಳು ಭಾರೀ ಪ್ರಮಾಣದ ಏರಿಕೆ ಕಂಡಿವೆ. ಬ್ಯಾರೆಲ್‌ಗೆ 120 ಡಾಲರ್ ಗಡಿ ಸಮೀಪಿಸಿವೆ. ಇದು 2022ರ ನಂತರದ ಅತಿ ಗರಿಷ್ಠವಾಗಿದೆ. ಕಳೆದ ವರ್ಷ 64 ಡಾಲರ್‌ಗೆ ಕಚ್ಚಾತೈಲ ಬೆಲೆ ಇಳಿದಿತ್ತು. ಇದಲ್ಲದೆ ಯುದ್ಧ ಆರಂಭಕ್ಕೂ ಮುನ್ನ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 74 ಡಾಲರ್ ಇತ್ತು.
ಅಲ್ಲದೆ, ಭಾನುವಾರ ಕಚ್ಚಾತೈಲ ಬೆಲೆ 92 ಡಾಲರ್ ಇತ್ತು. ಹೀಗಾಗಿ ಕೇವಲ 10 ದಿನದಲ್ಲಿ ಬೆಲೆ 46 ಡಾಲರ್‌ನಷ್ಟು ಹಾಗೂ ಒಂದೇ ದಿನದಲ್ಲಿ 28 ಡಾಲರ್ ಏರಿಕೆ ಆದಂತಾಗಿದೆ. ಇದರಿಂದ ವಿಶ್ವಾದ್ಯಂತ ತೈಲ ಬೆಲೆ ಏರಿಕೆ ಭೀತಿ ಎದುರಾಗಿದೆ.
ಗಲ್ಫ್‌ನ ಪ್ರಮುಖ ಉತ್ಪಾದಕರು ಉತ್ಪಾದನೆಯನ್ನು ಕಡಿಮೆ ಮಾಡಿದ್ದರಿಂದ, ಇರಾನ್ ದೇಶವು ತನ್ನ ಮೇಲಿನ ದಾಳಿಗೆ ಪ್ರತೀಕಾರವಾಗಿ ಹೋರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ, ಭಾನುವಾರ ಇಸ್ರೇಲ್ ಸೇನೆಯು ಇರಾನ್‌ನ 30 ತೈಲಾಗಾರಗಳ ಮೇಲೆ ದಾಳಿ ಮಾಡಿದ್ದರಿಂದ ತೈಲ ಬೆಲೆ ಗಗನಮುಖಿಯಾಗಿವೆ.