... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
LPG Shortage: ಬೆಂಗಳೂರಲ್ಲಿ 30% ಹೋಟೆಲ್ ಬಂದ್,

LPG Shortage: ಬೆಂಗಳೂರಲ್ಲಿ 30% ಹೋಟೆಲ್ ಬಂದ್, ಪಿಜಿಯಲ್ಲಿ ಊಟ ಕಟ್​! ಇತ್ತ ಆಟೋ ಡ್ರೈವರ್​​ಗಳಿಗೂ ಸಂಕಷ್ಟ

ಬೆಂಗಳೂರು : ಈಗ ಇಡೀ ದೇಶವೇ ಎಲ್‌ಪಿಜಿ (LPG) ಕೊರತೆಯ ಭೀತಿಯಿಂದ ತತ್ತರಿಸಿದೆ. ಹೋಟೆಲ್ (Hotel)​, ರೆಸ್ಟೋರೆಂಟ್‌ಗಳಿಗೆ ವಾಣಿಜ್ಯ ಸಿಲಿಂಡರ್‌ ಸಿಗ್ತಿಲ್ಲ. ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಳಸಂತೆ ಸಂತೆ ಸಾವಿರಾರು ರೂಗಳಿಗೆ ಸಿಲಿಂಡರ್ (Cylinder)​ ಮಾರಾಟವಾಗ್ತಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಬೆಂಗಳೂರಿನಲ್ಲಿ (Bengaluru) ಶೇಕಡಾ 30 ರಷ್ಟು ಹೋಟೆಲ್​​ಗಳು ಬಂದ್​ ಆಗಿದೆ. ಪಿಜಿಯಲ್ಲಿ ಒಂದು ಹೊತ್ತಿನ ಕೂಡ ಕಟ್ ಮಾಡಲಾಗಿದ್ದು, ಸರಿಯಾದ ಸಮಯಕ್ಕೆ CNG ಗ್ಯಾಸ್ ಸಿಗದೆ ಇತ್ತ ಆಟೋ ಡ್ರೈವರ್​ ಗಳು ಕೂಡ ಪರದಾಡುವಂತಾಗಿದೆ.
ಹೋಟೆಲ್​​ಗಳು ಬಂದ್ ಬಂದ್​ ಭಾರತದಲ್ಲಿ‌ ಕಮರ್ಷಿಯಲ್ ಗ್ಯಾಸ್ ಅಲಭ್ಯತೆಯಿಂದ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೆ ದೊಡ್ಡ ಹೊಡೆದ ಬಿದ್ದಿದೆ. ನಗರ 30-40ಕ್ಕೂ ಹೆಚ್ಚು ಹೋಟೆಲ್ ಬಂದ್ ಆಗಿದೆ. ಕಮರ್ಷಿಯಲ್ ಗ್ಯಾಸ್ ಸಿಗದ ಹಿನ್ನೆಲೆ ಮೆಜೆಸ್ಟಿಕ್ ನಲ್ಲಿ ಮೂರು ಹೋಟೆಲ್, ವಿಜಯನಗರ, ಜಯನಗರ, ಬಸವನಗುಡಿ ಸೇರಿದಂತೆ ನಗರದೆಲ್ಲೆಡೆ ಹೋಟೆಲ್‌ ಗಳು ಬಾಗಿಲು ಮುಚ್ಚಿವೆ. ನಾಳೆಗೆ ಹತ್ತು ಸಾವಿರ ದರ್ಶಿನಿ ಬಂದ್ ಆಗುತ್ತಾ? ನಗರದಲ್ಲಿ 40 ಸಾವಿರ ದರ್ಶಿನಿ, ಹೋಟೆಲ್, ರೆಸ್ಟೋರೆಂಟ್ ಗಳಿವೆ. ಇವುಗಳ 80ರಷ್ಟು ಹೋಟೆಲ್‌ಗಳಲ್ಲಿ ಮೆನು ಬದಲಾವಣೆ ಆಗಿದೆ. ಇಂದು ಸಂಜೆ ವೇಳೆ ಸಾವಿರಕ್ಕೂ ಹೆಚ್ಚು ಹೋಟೆಲ್ ಬಂದ್ ಆಗುವ ಸಾಧ್ಯತೆ ಇದೆ. ಇದೇ ಪರಿಸ್ಥಿತಿ ಮುಂದುವರೆದ್ರೆ ನಾಳೆಗೆ ಹತ್ತು ಸಾವಿರ ದರ್ಶಿನಿ, ಹೋಟೆಲ್‌ ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಹೋಟೆಲ್ ಬಂದ್ ಮಾಡದಂತೆ ಮನವಿ ಕೆಲವರು ಗೃಹ ಬಳಕೆಯ ಗ್ಯಾಸ್ ಬಳಸಿ ದರ್ಶಿನಿ ರನ್ ಮಾಡ್ತಿದ್ದಾರೆ. ಹೋಟೆಲ್ ಬಂದ್ ಮಾಡಬೇಡಿ, ಟೀ, ಕಾಫಿ ಕೊಡುವ ಮೂಲಕವಾದ್ರೂ ಹೋಟೆಲ್ ತೆರೆಯಿರಿ ಎಂದು ಹೋಟೆಲ್ ಮಾಲೀಕರಿಗೆ ಸಂಘದ ಅಧ್ಯಕ್ಷ ಪಿ ಸಿ ರಾವ್ ಮನವಿ ಮಾಡಿದ್ದಾರೆ. ನಾಳೆಗೆ ಈ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಪಿಜಿಯಲ್ಲಿ ಮಧ್ಯಾಹ್ನ ಊಟ ಕಟ್​ ಬೆಂಗಳೂರಿನ ಜನಸಂಖ್ಯೆಯಲ್ಲಿ ಶೇ. 70ರಷ್ಟು ಜನರು ಹೋಟೆಲ್, ರೆಸ್ಟೋರೆಂಟ್, ದರ್ಶಿನಿ, ಪಿಜಿ ನಂಬಿಕೊಂಡಿದ್ದಾರೆ. ಇದೀಗ ಬೆಂಗಳೂರಿನ ಜನತೆಗೆ ದೊಡ್ಡ ಸಂಕಷ್ಟ ಶುರುವಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆ ನಗರದ ಕೆಲ ಪಿಜಿಗಳಲ್ಲಿ ಮಧ್ಯಾಹ್ನದ ಊಟ ಕಟ್ ಮಾಡಲಾಗಿದೆ.

Source : News18 Kannada

1 hour ago

Home Flash News