Revanth Reddy on Bengaluru Traffic: ಬೆಂಗಳೂರು ಟ್ರಾಫಿಕ್ ಬಗ್ಗೆ ರೇವಂತ್ ರೆಡ್ಡಿ ವ್ಯಂಗ್ಯ! ತೆಲಂಗಾಣ ಸಿಎಂಗಾರು ಹೇಳಿದ್ದೇನು ಗೊತ್ತಾ?
ಹೈದರಾಬಾದ್: ಬೆಂಗಳೂರಿನ ಟ್ರಾಫಿಕ್ (Bengaluru Traffic) ಬಗ್ಗೆ ನೆರೆಯ ತೆಲಂಗಾಣ ರಾಜ್ಯದ ಸಿಎಂ (Telangana CM) ರೇವಂತ್ ರೆಡ್ಡಿ (Revanth Reddy) ವ್ಯಂಗ್ಯವಾಡಿದ್ದಾರೆ. ಕರ್ನಾಟಕದಲ್ಲಿ (Karnataka) ತಮ್ಮದೇ ಪಕ್ಷದ ಸರ್ಕಾರವಿದ್ದರೂ ರೇವಂತ್ ರೆಡ್ಡಿ, ಬೆಂಗಳೂರಿನ ಬಗ್ಗೆ ಟೀಕಿಸಿದ್ದಾರೆ. ನವದೆಹಲಿಯಲ್ಲಿ (New Delhi) ಮಾಲಿನ್ಯ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇದೆ. ಮುಂಬೈ (Mumbai) ಮತ್ತು ಚೆನ್ನೈನಲ್ಲಿ (Chennai) ಪ್ರವಾಹ (Flood) ಸಮಸ್ಯೆ ಇರುತ್ತೆ. ಆದರೆ ಹೈದರಾಬಾದ್ (Hyderabad) ಬೆಸ್ಟ್ ಅಂತ ರೇವಂತ್ ರೆಡ್ಡಿ ಹೇಳಿದ್ದಾರೆ. ಇನ್ನು ತೆಲಂಗಾಣ ಸಿಎಂ ಮಾತನ್ನು ಪ್ರಸ್ತಾಪಿಸಿರೋ ಕರ್ನಾಟಕ ಬಿಜೆಪಿ (Karnataka BJP), ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು (Congress Government) ತರಾಟೆಗೆ ತೆಗೆದುಕೊಂಡಿದೆ.
ಹೈದರಾಬಾದ್ ಸೇಫ್ ಎಂದ ರೇವಂತ್ ರೆಡ್ಡಿ
ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ನವದೆಹಲಿಯ ಮಾಲಿನ್ಯ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಮತ್ತು ಮುಂಬೈ ಮತ್ತು ಚೆನ್ನೈನಲ್ಲಿ ಪ್ರವಾಹವನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ರು. ಹೈದರಾಬಾದ್ ಇತರ ಪ್ರಮುಖ ಮಹಾನಗರಗಳಿಗಿಂತ ಸುರಕ್ಷಿತವಾಗಿದೆ ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ, ಚೆನ್ನೈ, ಮುಂಬೈ ಬಗ್ಗೆ ವ್ಯಂಗ್ಯ
ಕೆಲವು ಕಡೆಯಿಂದ ವಿರೋಧ ವ್ಯಕ್ತವಾಗಿದ್ದರೂ ಸರೋವರ ಮತ್ತು ನದಿ ಪುನರುಜ್ಜೀವನ ಪ್ರಯತ್ನಗಳು ಮುಂದುವರಿಯಲಿವೆ ಎಂದು ಅವರು ಹೇಳಿದರು. ಇತರ ಮಹಾನಗರಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಉಲ್ಲೇಖಿಸಿದ ರೇವಂತ್ ರೆಡ್ಡಿ, ದೆಹಲಿ ತೀವ್ರ ಮಾಲಿನ್ಯದಿಂದ ಬಳಲುತ್ತಿದೆ, ಆದರೆ ಒಂದೇ ಒಂದು ಮಳೆ ಬಂದರೂ ಮುಂಬೈ ಮತ್ತು ಚೆನ್ನೈನ ವಸತಿ ವಸಾಹತುಗಳು ಪ್ರವಾಹಕ್ಕೆ ಸಿಲುಕುತ್ತವೆ ಎಂದು ಹೇಳಿದರು.