ಈ ವರ್ಷದಿಂದ ಕೇದಾರ, ಬದರಿಗೆ ಹಿಂದೂಯೇತರರಿಗೆ ಪ್ರವೇಶವಿಲ್ಲ!
ಈ ವರ್ಷದಿಂದ ಉತ್ತರಾಖಂಡದ ಧಾರ್ಮಿಕ ಕ್ಷೇತ್ರಗಳಾದ ಕೇದಾರಾನಾಥ, ಬದ್ರಿನಾಥಕ್ಕೆ ಹಿಂದೂಯೇತರ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಲಾಗಲಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಂಗಳವಾರ ಬದ್ರಿನಾಥ-ಕೇದಾರನಾಥ ದೇಗುಲ ಸಮಿತಿ ನಡೆಸಿದ ಸಭೆಯಲ್ಲಿ ಒಮ್ಮತದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ತೀರ್ಥಯಾತ್ರೆ ಆರಂಭವಾಗುವ ಮುಂದಿನ ತಿಂಗಳಿನಿಂದ ಈ ಹೊಸ ನಿಯಮ ಜಾರಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹೊಸ ನಿಯಮದ ಪ್ರಕಾರ, ಹಿಂದೂಯೇತರರು ದೇವಾಲಯ ಸಂಕೀರ್ಣಗಳು ಅಥವಾ ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.