Good News: ಜೈಶಂಕರ್ ರಾಜತಾಂತ್ರಿಕತೆಗೆ ಬಿಗ್ ವಿಕ್ಟರಿ.. ಭಾರತೀಯ ತೈಲ ಟ್ಯಾಂಕರ್‌ಗಳ ಸಂಚಾರಕ್ಕೆ ಇರಾನ್ ಗ್ರೀನ್ ಸಿಗ್ನಲ್
ಸಚಿವ ಎಸ್.ಜೈಶಂಕರ್ ಅವರು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ತೈಲ ಟ್ಯಾಂಕರ್‌ಗಳು ಹಾದುಹೋಗಲು ಇರಾನ್ ಅನುಮತಿ ನೀಡಿದ್ದು, ಇದು ನವದೆಹಲಿಯ ಮಧ್ಯಪ್ರಾಚ್ಯ ರಾಜತಾಂತ್ರಿಕತೆಗೆ ಸಿಕ್ಕ ದೊಡ್ಡ ಜಯವಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ.
ಬೆನ್ನಲ್ಲೇ ಆಯಕಟ್ಟಿನ ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಭಾರತೀಯ ತೈಲ ಟ್ಯಾಂಕರ್‌ಗಳು ಹಾದುಹೋಗಲು ಇರಾನ್ ಅನುಮತಿ ನೀಡಿದ್ದು, ಇದು ನವದೆಹಲಿಯ ಮಧ್ಯಪ್ರಾಚ್ಯ ರಾಜತಾಂತ್ರಿಕತೆಗೆ ಸಿಕ್ಕ ದೊಡ್ಡ ಜಯವಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತದ ಇಂಧನ ಪೂರೈಕೆಗೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಉಭಯ ನಾಯಕರ ನಡುವೆ ಚರ್ಚೆಗಳು ನಡೆದಿದ್ದವು. ಹಾರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ಕಡಲ ಮಾರ್ಗಗಳಲ್ಲಿ ಒಂದಾಗಿದ್ದು, ಜಾಗತಿಕ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಬಹುಪಾಲು ಹಡಗುಗಳು ಇದರ ಮೂಲಕವೇ ಹಾದುಹೋಗುತ್ತವೆ. ಪ್ರಾದೇಶಿಕ ಸಂಘರ್ಷದಿಂದಾಗಿ ಹಡಗು ಸಂಚಾರಕ್ಕೆ ಅಡಚಣೆಯಾಗುವ ಆತಂಕ ಎದುರಾಗಿದ್ದರಿಂದ, ತನ್ನ ಇಂಧನ ಆಮದುಗಳಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಭಾರತ ತ್ವರಿತವಾಗಿ ಕಾರ್ಯಪ್ರವೃತ್ತವಾಯಿತು.
ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LPG) ಸಾಗಣೆಯು ಯಾವುದೇ ಪ್ರಮುಖ ಅಡೆತಡೆಯಿಲ್ಲದೆ ಮುಂದುವರಿಯಲು, ಭಾರತೀಯ ಹಡಗುಗಳಿಗೆ ಸಮುದ್ರ ಮಾರ್ಗವನ್ನು ಮುಕ್ತವಾಗಿಡುವುದು ಈ ರಾಜತಾಂತ್ರಿಕ ಮಾತುಕತೆಯ ಪ್ರಮುಖ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಭಾರತವು ಇಂಧನಕ್ಕಾಗಿ ಆಮದುಗಳನ್ನೇ ಹೆಚ್ಚು ಅವಲಂಬಿಸಿರುವುದರಿಂದ ಗಲ್ಫ್ ಹಡಗು ಮಾರ್ಗಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ದೇಶದ ಇಂಧನ ಭದ್ರತೆಗೆ ಅತ್ಯಂತ ನಿರ್ಣಾಯಕವಾಗಿದೆ. ಇರಾನಿ ಅಧಿಕಾರಿಗಳು ಭಾರತೀಯ ಟ್ಯಾಂಕರ್‌ಗಳಿಗೆ ಈ ಮಾರ್ಗವನ್ನು ಬಳಸಲು ಅನುಮತಿ ನೀಡಿದ್ದರೆ, ಮತ್ತೊಂದೆಡೆ ಅಮೆರಿಕ, ಯುರೋಪ್ ಮತ್ತು ಇಸ್ರೇಲ್‌ಗೆ ಸೇರಿದ ಹಡಗುಗಳಿಗೆ ಈ ಜಲಮಾರ್ಗದಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ.