OBC ಸಮುದಾಯಕ್ಕೆ ಬಂಪರ್ ಸುದ್ದಿ! ಮೀಸಲಾತಿ ವಿಚಾರದಲ್ಲಿ ಭಾರೀ ಬದಲಾವಣೆ ಮಾಡಿದ ಸುಪ್ರೀಂ ಕೋರ್ಟ್
OBC Reservation: ಸಾಮಾನ್ಯವಾಗಿ OBC ಮೀಸಲಾತಿ ಪಡೆಯುವಾಗ ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಹೆಚ್ಚಿದ್ದರೆ ಅವರು ಕೆನೆಪದರಕ್ಕೆ (Creamy Layer) ಒಳಪಡುತ್ತಾರೆ. ಆದರೆ, ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಕೆಲವೊಂದು ಪ್ರಮುಖ ವಿನಾಯಿತಿಗಳನ್ನು ನೀಡಿದೆ. ಅವುಗಳು ಹೀಗಿದೆ. ನವದೆಹಲಿ: ಹಿಂದುಳಿದ ವರ್ಗಗಳ ಮೀಸಲಾತಿ (Reservation for backward classes) ಸೌಲಭ್ಯ ಪಡೆಯುವಲ್ಲಿ 'ಕೆನೆಪದರ' (Creamy Layer) ಎಂಬ ನಿಯಮವು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾಗಿ, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಒಬಿಸಿ (OBC) ಅಂದರೆ ಇತರೆ ಹಿಂದುಳಿದ ವರ್ಗಗಳ (Other Backward Classes) ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ಪರಿಹಾರ ನೀಡಿದೆ.
ವಾರ್ಷಿಕ ಕುಟುಂಬ ಆದಾಯ 8 ಲಕ್ಷ ರೂಪಾಯಿಗಿಂತ ಹೆಚ್ಚು ಇದ್ದರೂ, ಪೋಷಕರು ಕೆಳಮಟ್ಟದ ಸರ್ಕಾರಿ ಉದ್ಯೋಗಗಳಲ್ಲಿ (Government Job) ಇದ್ದರೆ ಅವರನ್ನು ಸ್ವಯಂ ಕೆನೆಪದರದಲ್ಲಿ ಸೇರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ತೀರ್ಪು ಕಾರಣದಿಂದ ಹಿಂದೆ ಯುಪಿಎಸ್‌ಸಿ ಪರೀಕ್ಷೆಯಿಂದ (UPSC Exam) ಹೊರಗಿಡಲ್ಪಟ್ಟ ಹಲವು ಅಭ್ಯರ್ಥಿಗಳಿಗೆ ಮತ್ತೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಆ ಕುರಿತ ವರದಿ ಇಲ್ಲಿದೆ: ಸಾಮಾನ್ಯವಾಗಿ OBC ಮೀಸಲಾತಿ ಪಡೆಯುವಾಗ ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು ₹8 ಲಕ್ಷಕ್ಕಿಂತ ಹೆಚ್ಚಿದ್ದರೆ ಅವರು ಕೆನೆಪದರಕ್ಕೆ (Creamy Layer) ಒಳಪಡುತ್ತಾರೆ. ಆದರೆ, ಸುಪ್ರೀಂ ಕೋರ್ಟ್ ಈ ವಿಚಾರವಾಗಿ ಕೆಲವೊಂದು ಪ್ರಮುಖ ವಿನಾಯಿತಿಗಳನ್ನು ನೀಡಿದೆ. ಅವುಗಳು ಹೀಗಿದೆ.