... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ರಷ್ಯಾ ತೈಲದ ಬಗ್ಗೆ ಟ್ರಂಪ್​ ಬಿಗ್​ ಯೂಟರ್ನ್​!

Russian Oil: ರಷ್ಯಾ ತೈಲದ ಬಗ್ಗೆ ಟ್ರಂಪ್​ ಬಿಗ್​ ಯೂಟರ್ನ್​! ಮೊದಲು ಭಾರತಕ್ಕೆ ವಿನಾಯಿತಿ, ಈಗ ಎಲ್ಲರಿಗೂ ನೋಟಿಸ್​!

ಇತ್ತೀಚಿನ ದಿನಗಳಲ್ಲಿ ಅಮೆರಿಕ ರಷ್ಯಾದ ತೈಲ (Russian Oil) ಮಾರುಕಟ್ಟೆಗೆ ಪ್ರವೇಶಿಸುವುದನ್ನು ತಡೆಯುವುದಾಗಿ ಕಠಿಣ ನಿಲುವು ತಳೆದಿತ್ತು. ಆದರೆ ಈಗ ಸ್ಥಿತಿ ಬದಲಾಗಿದೆ. ಅಮೆರಿಕ-ಇರಾನ್ ಯುದ್ಧವು (America Iran War) ಕಚ್ಚಾ ತೈಲದ ಬೆಲೆ ಏರಿಕೆಗೆ (Oil Price Hike) ಕಾರಣವಾಗಿದೆ. ಇದು ಅಮೆರಿಕವನ್ನು ಚಿಂತೆಗೀಡುಮಾಡುತ್ತಿದೆ. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ನಂತರ ಬೆಂಚ್‌ಮಾರ್ಕ್ ಕಚ್ಚಾ ತೈಲದ ಬೆಲೆಗಳು ಸರಿಸುಮಾರು 40 ರಿಂದ 50 ಪ್ರತಿಶತದಷ್ಟು ಏರಿಕೆಯಾಗಿವೆ. ಹೀಗಾಗಿ ರಷ್ಯಾದ ತೈಲ ಖರೀದಿ ಬಗ್ಗೆ ಡೊನಾಲ್ಡ್​ ಟ್ರಂಪ್​​ ಯೂಟರ್ನ್​ ಹೊಡೆದಿದ್ದಾರೆ.
ಮೊದಲು ರಷ್ಯಾ ತೈಲ ಖರೀದಿ ವಿರೋಧಿಸುತ್ತಿದ್ದ ಟ್ರಂಪ್​, ಈಗ ಇತರ ದೇಶಗಳು ರಷ್ಯಾದ ತೈಲವನ್ನು ಖರೀದಿಸುವಂತೆ ಒತ್ತಾಯಿಸುತ್ತಿದೆ. ಆರಂಭದಲ್ಲಿ ಭಾರತಕ್ಕೆ ವಿನಾಯಿತಿ ನೀಡಿದ್ದ ಅಮೆರಿಕ ಈಗ ಎಲ್ಲಾ ದೇಶಗಳಿಗೆ ರಷ್ಯಾದ ತೈಲ ಖರೀದಿಸಲು ಅವಕಾಶ ನೀಡಿದೆ. ರಷ್ಯಾ ತೈಲ ಖರೀದಿಗೆ ಅವಕಾಶ ಕೊಟ್ಟ ಟ್ರಂಪ್​! ಹೌದು ಇತರ ದೇಶಗಳು ರಷ್ಯಾದ ತೈಲವನ್ನು ಖರೀದಿಸುವಂತೆ ಅಮೆರಿಕ ಒತ್ತಾಯಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅಮೆರಿಕ-ಇರಾನ್ ಯುದ್ಧದಿಂದ ಜಾಗತಿಕ ತೈಲ ಬೆಲೆಗಳಲ್ಲಿ ತೀವ್ರ ಏರಿಕೆ.

 ಈ ಭಯದಿಂದ ಅಮೆರಿಕ ತಾತ್ಕಾಲಿಕವಾಗಿ ರಷ್ಯಾದ ತೈಲ ಸಾಗಣೆಗಳನ್ನು ಅನುಮೋದಿಸಿದೆ. ಗುರುವಾರ ಯುಎಸ್ ಖಜಾನೆ ಇಲಾಖೆ ಈ ಬಗ್ಗೆ ಸೂಚನೆ ನೀಡಿದೆ. ಮಾರ್ಚ್ 12ರ ಬೆಳಗ್ಗೆ 12:01ರೊಳಗೆ ಹಡಗುಗಳಲ್ಲಿ ಲೋಡ್ ಆಗಿರುವ ರಷ್ಯಾದ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ವಿಶೇಷ ಪರವಾನಗಿ ನೀಡಲಾಗಿದೆ. ಈ ಸಾಗಣೆಗಳನ್ನು ಏಪ್ರಿಲ್ 11ರವರೆಗೆ ಮಾರಾಟ ಮಾಡಬಹುದು ಎಂದು ಖಜಾನೆ ಇಲಾಖೆ ತಿಳಿಸಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ತರುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ.

Source : News18 Kannada

1 hour ago

Home Flash News