ಯುದ್ಧದ ನಿರ್ಬಂಧ ಮೀರಿ ಯುಎಇಯಿಂದ ಕಾರವಾರ ತಲುಪಿದ ಕಚ್ಚಾ ಡಾಂಬರ್ ತುಂಬಿದ ಹಡಗು
ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಹರ್ಮೋಜ್ ಜಲಸಂಧಿಯಲ್ಲಿ ಇರಾನ್ ನಿರ್ಬಂಧ ಹೇರಿದ್ದರೂ, ಯುಎಇಯಿಂದ 3100 ಟನ್ ಬಿಟುಮೆನ್ (ಕಚ್ಚಾ ಡಾಂಬರ್) ಹೊತ್ತ 'ಚೆಂಗ್ ಎಕ್ಸ್' ಹೆಸರಿನ ಹಡಗು ಕರ್ನಾಟಕದ ಕಾರವಾರ ಬಂದರಿಗೆ ಯಶಸ್ವಿಯಾಗಿ ಆಗಮಿಸಿದೆ. ಕಾರವಾರ: ಇರಾನ್ ಇಸ್ರೇಲ್ ಯುದ್ಧ ಆರಂಭವಾದ ನಂತರ ಬಿಟುಮೆನ್ ಹೊತ್ತ ಹಡಗೊಂದು ಯುಎಇ ಯಿಂದ ಕಾರವಾರ ಬಂದರಿಗೆ ಆಗಮಿಸಿದೆ. ಚೆಂಗ್ ಎಕ್ಸ್ ಹೆಸರಿನ ಈ ಹಡಗು ಕಾರವಾರಕ್ಕೆ ಆಗಮಿಸಿದ್ದು, ಸುಮಾರು 5.500 ಸಾವಿರ ಟನ್ ಸಾಮರ್ಥ್ಯದ ಈ ಹಡಗಿನಲ್ಲಿ 3100 ಟನ್ ಬಿಟುಮಿನ್ ಲೋಡ್(ಕಚ್ಚಾ ಡಾಂಬರ್) ಹೊತ್ತು ಇದು ಕಾರವಾರ ಬಂದರಿಗೆ ಆಗಮಿಸಿದೆ. ಅಮೆರಿಕಾ ಇಸ್ರೇಲ್ ಇರಾನ್ ನಡುವಣ ಯುದ್ಧದಿಂದಾಗಿ ತನ್ನ ಹಿಡಿತದಲ್ಲಿರುವ ಹರ್ಮೋಜ್ ಜಲಸಂಧಿಯಲ್ಲಿ ಯಾವುದೇ ಹಡಗುಗಗಳ ಸಾಗಣೆಗೆ ಇರಾನ್ ಅನುಮತಿ ನಿರಾಕರಿಸಿ ನಿರ್ಬಂಧ ಹೇರಿತ್ತು.
ಈ ನಿರ್ಬಂಧದ ನಡುವೆಯೂ ಯುಎಇಯ ಕೋರ್ಪಕಾನ್‌ನಿಂದ ಈ ಹಡಗು ಕರ್ನಾಟಕದ ಕಾರವಾರ ಬಂದರಿಗೆ ಆಗಮಿಸಿದೆ. ಅಮೆರಿಕಾ ಇಸ್ರೇಲ್ ಇರಾನ್ ನಡುವಣ ಯುದ್ಧದಿಂದಾಗಿ ತನ್ನ ಹಿಡಿತದಲ್ಲಿರುವ ಹರ್ಮೋಜ್ ಜಲಸಂಧಿಯಲ್ಲಿ ಯಾವುದೇ ಹಡಗುಗಗಳ ಸಾಗಣೆಗೆ ಇರಾನ್ ಅನುಮತಿ ನಿರಾಕರಿಸಿ ನಿರ್ಬಂಧ ಹೇರಿತ್ತು. ಈ ನಿರ್ಬಂಧದ ನಡುವೆಯೂ ಯುಎಇಯ ಕೋರ್ಪಕಾನ್‌ನಿಂದ ಈ ಹಡಗು ಕರ್ನಾಟಕದ ಕಾರವಾರ ಬಂದರಿಗೆ ಆಗಮಿಸಿದೆ. ಇಂದು ಸಂಜೆ ಇಲ್ಲಿಂದ ಈ ಹಡಗು ವಾಪಾಸ್ ಹೋಗಲಿದೆ ಆದರೆ ಎಲ್ಲಿಗೆ ಹೋಗಲಿದೆ ಎಂದು ಮಾಹಿತಿ ಇಲ್ಲ ಎಂದು ಹಡಗಿನ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.