ಇರಾನ್ ಶರಣಾಗುವ ಹಂತದಲ್ಲಿದೆ: ಜಿ7 ಸಭೆಯಲ್ಲಿ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಜಿ7 ರಾಷ್ಟ್ರಗಳ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಶರಣಾಗುವ ಹಂತದಲ್ಲಿದೆ ಎಂದು ಹೇಳಿದ್ದಾರೆ. ಬುಧವಾರ ನಡೆದ ಸಭೆಯಲ್ಲಿ 'ಆಪರೇಷನ್ ಎಪಿಕ್ ಫ್ಯೂರಿ'ಯ ಯಶಸ್ಸನ್ನು ಶ್ಲಾಘಿಸಿದ ಟ್ರಂಪ್, ‘ನಮ್ಮೆಲ್ಲರಿಗೂ ಬೆದರಿಕೆಯಾಗಿದ್ದ ಕ್ಯಾನ್ಸರ್ ಅನ್ನು ನಾನು ತೊಡೆದುಹಾಕಿದ್ದೇನೆ’ ಎಂದು ಸ್ವಪ್ರಶಂಸೆ ಮಾಡಿಕೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
‘ಇರಾನ್‌ನಲ್ಲಿ ನಾಯಕ ಯಾರೆಂಬುದೇ ಯಾರಿಗೂ ತಿಳಿಯದಂತಾಗಿದೆ. ಹೀಗಾಗಿ ಶರಣಾಗಿದ್ದೇವೆ ಎಂದು ಘೋಷಿಸಲು ಅಲ್ಲಿ ಯಾರೂ ಬದುಕುಳಿದಿಲ್ಲ’ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್ ನೂತನ ನಾಯಕ ಮೊಜ್ತಬಾ ಖಮೇನಿ, ತಮ್ಮ ಪ್ರಜೆಗಳ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ, ಹೊರ್ಮುಜ್ ಜಲಸಂಧಿ ಮೇಲಿನ ಹಿಡಿತವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಇನ್ನು, ಇರಾನ್ ಮೇಲೆ ದಾಳಿ ಮುಂದುವರಿಸುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ. ಮೊಜ್ತಬಾ ಖಮೇನಿಯನ್ನು ಹುಚ್ಚ ಎಂದು ಕರೆದಿದರುವ ಟ್ರಂಪ್, ಅವರನ್ನು ಹತ್ಯೆ ಮಾಡುವುದು ತಮಗೆ ಸಿಗುವ ಗೌರವವಾಗಿದೆ ಎಂದಿದ್ದಾರೆ.