KSRTC: ಯುಗಾದಿ-ರಂಜಾನ್ ಹಬ್ಬಕ್ಕೆಂದು ಊರಿಗೆ ಹೋಗುವ KSRTC ಪ್ರಯಾಣಿಕರಿಗೆ ಬಂಪರ್ ಆಫರ್! ಟಿಕೆಟ್ನಲ್ಲೂ ರಿಯಾಯಿತಿ
ಬೆಂಗಳೂರು (ಮಾ.15): ಯುಗಾದಿ (Ugadi) ಹಾಗೂ ರಂಜಾನ್ ಹಬ್ಬ ಸಮೀಪಿಸುತ್ತಿದ್ದು, ಹಬ್ಬಕ್ಕೆಂದು ಊರಿಗೆ ಹೋಗಲು ಅನೇಕರು ಸಿದ್ದರಾಗಿದ್ದಾರೆ. ಹಬ್ಬಕ್ಕೆಂದು ಊರುಗಳಿಗೆ ಹೋಗುವವರಿಗೆ ಕೆಎಸ್ಆರ್ಟಿಸಿ (KSRTC) 2000 ವಿಶೇಷ ಬಸ್ಗಳ ಜೊತೆಗೆ ಬಿಗ್ ಆಫರ್ ನೀಡಿದೆ. ಮಾರ್ಚ್ 18 ರಿಂದ 20 ರರೆಗೆ ಬೆಂಗಳೂರಿನಿಂದ (Bengaluru) ವಿವಿಧ ಜಿಲ್ಲೆಗೆ ಹಾಗೂ ಮಾ.22 ರಂದು ಹಲವು ಪ್ರದೇಶಗಳಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ (Bus Arrangements ) ಮಾಡಲಾಗಿದೆ. 2000 ವಿಶೇಷ ಬಸ್ ವ್ಯವಸ್ಥೆ ಯುಗಾದಿ ಹಬ್ಬ ಹಾಗೂ ರಂಜಾನ್ ಜೊತೆಗೆ ಲಾಂಗ್ ವೀಕೆಂಡ್ ಇರುವ ಹಿನ್ನೆಲೆ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಕೂಡ ಹೆಚ್ಚಿರುತ್ತದೆ. ಹೀಗಾಗಿ KSRTC ವತಿಯಿಂದ 2000 ವಿಶೇಷ ಬಸ್ ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಹಬ್ಬ ಅಂದ್ರೆ ಬೆಂಗಳೂರೇ ಖಾಲಿಯಾಗುತ್ತೆ. ಬೆಂಗಳೂರಿಂದ ಮಾರ್ಚ್ 18 ರಿಂದ 20 ರ ವರೆಗೆ ವಿವಿಧ ಪ್ರದೇಶಗಳಿಗೆ ಹಾಗೂ ಮಾರ್ಚ್ 22 ರಂದು ಹಲವು ಊರುಗಳಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.