ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ಗೆ ಕೊರತೆಯಾಗಲಿಲ್ಲ : ಎಲ್‌ಪಿಜಿ ಸಿಲಿಂಡರ್ ಮಾತ್ರ ಕೊರತೆಯಾಗಿದ್ದು ಏಕೆ?
ಭಾರತದಲ್ಲಿ ಇರಾನ್- ಇಸ್ರೇಲ್ ಯುದ್ಧದಿಂದ ಪೆಟ್ರೋಲ್, ಡೀಸೆಲ್ ಗೆ ಕೊರತೆಯಾಗಿಲ್ಲ. ಆದರೆ, ಎಲ್‌ಪಿಜಿ ಸಿಲಿಂಡರ್ ಗೆ ಮಾತ್ರ ಭಾರಿ ಕೊರತೆಯಾಗಿದೆ. ಕಚ್ಚಾತೈಲ, ಎಲ್‌ಪಿಜಿ ಎರಡೂ ಹೊರ್ಮುಜ್ ಜಲಸಂಧಿ ಮೂಲಕವೇ ಭಾರತಕ್ಕೆ ಬರುತ್ತೆ. ಆದರೇ, ಎಲ್‌ಪಿಜಿಗೆ ಮಾತ್ರ ಕೊರತೆಯಾಗಿದ್ದು ಏಕೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.ಇರಾನ್- ಇಸ್ರೇಲ್ ಯುದ್ಧದಿಂದ ಭಾರತದಲ್ಲಿ ಅಲ್ಲೋಲ ಕಲ್ಲೋಲ!
ಎಲ್‌ಪಿಜಿ ಸಿಲಿಂಡರ್‌ಗೆ ಭಾರಿ ಕೊರತೆ
ಭಾರತದಲ್ಲಿ ಈಗ ಎಲ್‌ಪಿಜಿ ಸಿಲಿಂಡರ್ ಕೊರತೆಯು ದೊಡ್ಡ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಜನರು ಪ್ಯಾನಿಕ್ ಆಗಿದ್ದಾರೆ. ಗ್ಯಾಸ್ ಏಜೆನ್ಸಿಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಖಾಲಿಯಾದ ಮೇಲೆ ಹೊಸದಾಗಿ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ಕೂಡ ಮಾಡಲಿಕ್ಕೆ ಆಗುತ್ತಿಲ್ಲ. ಗ್ಯಾಸ್ ಏಜೆನ್ಸಿ ಮುಂದೆ ದಿನಗಟ್ಟಲೇ ಕ್ಯೂ ನಿಂತರೂ ಒಂದೇ ಒಂದು ಎಲ್‌ಪಿಜಿ ಸಿಲಿಂಡರ್ ಕೂಡ ಸಿಗುತ್ತಿಲ್ಲ.
ದೇಶದ ಉದ್ದಗಲಕ್ಕೂ ಹೋಟೇಲ್, ರೆಸ್ಟೋರೆಂಟ್ ಬಂದ್ !
ಹೋಟೇಲ್ ಅವಲಂಬಿಸಿದವರಿಗೆ ಸಂಕಷ್ಟ!
ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ದೇಶದ ಉದ್ದಗಲಕ್ಕೂ ಹೋಟೇಲ್ , ರೆಸ್ಟೋರೆಂಟ್ ಗಳು ಬಂದ್ ಆಗುತ್ತಿವೆ.
ಹೋಟೇಲ್, ರೆಸ್ಟೋರೆಂಟ್ ಗಳಿಗೆ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮವಾಗಿ ಜಮ್ಮು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿವರೆಗೂ ಹೋಟೇಲ್, ರೆಸ್ಟೊರೆಂಟ್ ಗಳಿಗೆ ಬೀಗ ಹಾಕದೇ ಬೇರೆ ಮಾರ್ಗ ಇಲ್ಲ ಎಂಬಂತಾಗಿದೆ. ಹತ್ತಾರು ವರ್ಷ ಇತಿಹಾಸ ಇರುವ, ಪ್ರಸಿದ್ದ ಹೋಟೇಲ್ ಗಳು, ಆರ್ಥಿಕ ಶಕ್ತಿ ಇರುವ ಹೋಟೇಲ್ ಗಳು ಕೂಡ ಎಲ್‌ಪಿಜಿ ಸಿಲಿಂಡರ್ ಇಲ್ಲದೇ ಅಡುಗೆ ಮಾಡಲಾಗದೇ ಬಾಗಿಲು ಹಾಕುತ್ತಿವೆ!. ನಗರಗಳಿಗೆ ಪ್ರತಿ ನಿತ್ಯ ಬಂದು ಹೋಗುವ ಲಕ್ಷಾಂತರ ಜನರಿದ್ದಾರೆ. ಇವರನ್ನೇ ಪ್ಲೋಟಿಂಗ್ ಜನಸಂಖ್ಯೆ ಅಂತ ಕರೆಯುತ್ತೇವೆ. ನಮ್ಮ ರಾಜಧಾನಿ ಬೆಂಗಳೂರು ನಗರದ ಜನಸಂಖ್ಯೆ 1 ಕೋಟಿ 40 ಲಕ್ಷ. ಇನ್ನೂ ಬೆಂಗಳೂರಿಗೆ ಪ್ರತಿ ನಿತ್ಯ ಕೆಲಸ ಕಾರ್ಯಗಳಿಗಾಗಿ ಬಂದು ಹೋಗುವ ಪ್ಲೋಟಿಂಗ್ ಜನಸಂಖ್ಯೆಯೇ 40 ಲಕ್ಷ. ಈ ಪ್ಲೋಟಿಂಗ್ ಜನಸಂಖ್ಯೆ ಊಟ, ತಿಂಡಿಗಾಗಿ ಹೋಟೇಲ್, ರೆಸ್ಟೊರೆಂಟ್ ಗಳನ್ನೇ ಅವಲಂಬಿಸಿದ್ದಾರೆ. ಬೆಂಗಳೂರಿನಲ್ಲೂ ಹೋಟೇಲ್, ರೆಸ್ಟೊರೆಂಟ್ ಗಳು ಬಂದ್ ಆಗಿದ್ದರಿಂದ ಪ್ಲೋಟಿಂಗ್ ಜನಸಂಖ್ಯೆಯ ಜನರಿಗೆ ಭಾರಿ ತೊಂದರೆಯಾಗುತ್ತಿದೆ.
ಇನ್ನೂ ಕಮರ್ಷಿಯಲ್ ಸಿಲಿಂಡರ್ ಸಿಗದೇ, ಮದುವೆ, ಬೀಗರೂಟ, ಎಂಗೇಜ್ ಮೆಂಟ್, ಪಾರ್ಟಿ, ಫಂಕ್ಷನ್ ಗಳಿಗೂ ಭಾರಿ ತೊಂದರೆಯಾಗಿದೆ. ಹೋಟೇಲ್ ಉದ್ಯಮವನ್ನು ಅವಲಂಬಿಸಿದವರಿಗೂ ಭಾರಿ ತೊಂದರೆಯಾಗಿದೆ. ಇದಕ್ಕೆಲ್ಲಾ ಕಾರಣ ಇರಾನ್ - ಇಸ್ರೇಲ್ ಹಾಗೂ ಅಮೆರಿಕಾದ ನಡುವಿನ ಯುದ್ಧ. ಯುದ್ಧದಿಂದಾಗಿ ಹೊರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ್ದೇ ಕಾರಣ.
ಭಾರತದಲ್ಲಿ ಪೆಟ್ರೋಲ್, ಡೀಸೆಲ್‌ಗೆ ಕೊರತೆಯಾಗಲಿಲ್ಲ
ಎಲ್‌ಪಿಜಿ ಸಿಲಿಂಡರ್ ಗೆ ಮಾತ್ರ ಕೊರತೆಯಾಗಿದ್ದು ಏಕೆ?
ಇರಾನ್ ದೇಶವು ಪರ್ಶಿಯನ್ ಗಲ್ಪ್ ನಲ್ಲಿರುವ ಹೊರ್ಮುಜ್ ಜಲಸಂಧಿಯಲ್ಲಿ ಕಚ್ಚಾತೈಲ, ಗ್ಯಾಸ್ ಟ್ಯಾಂಕರ್ ಸಂಚಾರವನ್ನು ಬಂದ್ ಮಾಡಿತ್ತು. ಇದರಿಂದ ಭಾರತಕ್ಕೆ ಗಲ್ಪ್ ರಾಷ್ಟ್ರಗಳಿಂದ ಪೂರೈಕೆಯಾಗುತ್ತಿದ್ದ ಕಚ್ಚಾತೈಲದ ಪೂರೈಕೆ ಕೂಡ ಬಂದ್ ಆಗಿದೆ. ಗ್ಯಾಸ್ ಟ್ಯಾಂಕರ್ ಗಳು ಕೂಡ ಬಂದ್ ಆಗಿವೆ. ಆದರೇ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಗೆ ಯಾವುದೇ ಕೊರತೆಯಾಗಿಲ್ಲ. ಎಲ್ಲ ಪೆಟ್ರೋಲ್ ಬಂಕ್ ಗಳು ಎಂದಿನಂತೆಯೇ ಪೆಟ್ರೋಲ್, ಡೀಸೆಲ್ ಅನ್ನು ವಾಹನಗಳಿಗೆ ನೀಡುತ್ತಿವೆ.