IPL Tickets: ಶಾಸಕರಿಗ್ಯಾಕೆ ಫ್ರೀ ಟಿಕೆಟ್ ಕೊಡ್ಬೇಕು? ತೇಜಸ್ವಿ ಸೂರ್ಯ, ನಿಖಿಲ್ ಸೇರಿ ಯುವ ನಾಯಕರು ಕಿಡಿಕಿಡಿ
IPL Tickets: ಶಾಸಕರ ಐಪಿಎಲ್ ಟಿಕೆಟ್ ಮನವಿಗೆ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಯಾಕೆ ಕೆಎಸ್ ಸಿಎ ಅಥವಾ ಯಾವುದೇ ಕ್ರೀಡಾ ಸಂಸ್ಥೆ ಶಾಸಕರಿಗೆ ಉಚಿತ ಟಿಕೆಟ್‌ಗಳನ್ನು ನೀಡಬೇಕು? ಅಂತ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ. ಇನ್ನು ಶಾಸಕರ ಐಪಿಎಲ್ ಬೇಡಿಕೆಗೆ ಬಿವೈ ವಿಜಯೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರು, ಫ್ರೀ (Free) ಸಿಕ್ರೆ ನಂಗೊಂದು, ನಮ್ಮ ಮನೆಯವ್ರಿಗೂ ಒಂದು ಅನ್ನೋ ಗಾದೆ ಇದೆ. ಇದೇ ರೀತಿ ನಮ್ಮ ರಾಜ್ಯದ ಶಾಸಕರು (MLA) ನಮಗೊಂದು ಐಪಿಎಲ್ ಟಿಕೆಟ್ (IPL Ticket), ನಮ್ಮ ಹೆಂಡತಿ, ಮಕ್ಕಳಿಗೆ ಸೇರಿ 4 ಟಿಕೆಟ್ ಕೊಡ್ಬೇಕು ಅಂತ ಅಧಿವೇಶನದಲ್ಲಿ (Assembly) ತಮ್ಮ ಅಳಲು ತೋಡಿಕೊಂಡಿದ್ದರು.
ಇದಕ್ಕೆ ಪರಮೇಶ್ವರ್ (Dr G Parameshwar) ಸೇರಿದಂತೆ ಹಲವು ಸಚಿವರು (Ministers) ಸಹಮತ ಸೂಚಿಸಿದ್ದರು. ಇದೀಗ ಶಾಸಕರ ಐಪಿಎಲ್ ಟಿಕೆಟ್ ಮನವಿಗೆ ಸಂಸದ ತೇಜಸ್ವಿ ಸೂರ್ಯ (Tejaswi Surya) ಕಿಡಿಕಾರಿದ್ದಾರೆ. ಯಾಕೆ ಕೆಎಸ್ ಸಿಎ ಅಥವಾ ಯಾವುದೇ ಕ್ರೀಡಾ ಸಂಸ್ಥೆ ಶಾಸಕರಿಗೆ ಉಚಿತ ಟಿಕೆಟ್‌ಗಳನ್ನು ನೀಡಬೇಕು? ಅಂತ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ. ಇನ್ನು ಶಾಸಕರ ಐಪಿಎಲ್ ಬೇಡಿಕೆಗೆ ಬಿವೈ ವಿಜಯೇಂದ್ರ (BY VIjayendra) ಹಾಗೂ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.