... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
TVK-Vijay: ಪೆರಂಬೂರಿಂದ ಕೊಲತ್ತೂರಿಗೆ ಹೋಗುವಾಗ ಆಗಿದ್ದೇನು?

TVK-Vijay: ಪೆರಂಬೂರಿಂದ ಕೊಲತ್ತೂರಿಗೆ ಹೋಗುವಾಗ ಆಗಿದ್ದೇನು? ಭಾರೀ ಭದ್ರತಾ ಲೋಪ? ಅಮಿತ್ ಶಾಗೆ ವಿಜಯ್ ಅರ್ಜೆಂಟ್ ಪತ್ರ

ತಮಿಳುನಾಡಿನಲ್ಲಿ (Tamil Nadu) ಚುನಾವಣಾ ಪ್ರಚಾರ (Election Campaign) ರಂಗೇರಿದೆ. ಈ ತಿಂಗಳು 23ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಪಕ್ಷಗಳೆಲ್ಲ ಭಾರೀ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ನಟ ವಿಜಯ್ ಅವರು ಕೂಡಾ ನಾಮಪತ್ರವನ್ನು (Nomination) ಸಲ್ಲಿಸಿ ಪ್ರಚಾರ ಶುರುಮಾಡಿಕೊಂಡಿದ್ದಾರೆ. ಆದರೆ ಪ್ರಚಾರ ವಿಚಾರದಲ್ಲಿ ಅವರಿಗೆ ಹಿನ್ನಡೆಯಾಗುತ್ತಲೇ ಇದೆ. ಹಲವಾರು ಬಾರಿ ಅವರ ರ್ಯಾಲಿ ಅನುಮತಿ ರದ್ದಾದರೆ, ಕೆಲವೊಂದು ಚುನಾವಣಾ ಅಭಿಯಾನ ನಿಗದಿತ ಸಮಯಕ್ಕಿಂತ ಮೊದಲೇ ಮೊಟಕಾಗುತ್ತಿದೆ.
ಈಗ ನಡೆಯುತ್ತಿರುವ ಚುನಾವಣಾ ಪ್ರಚಾರಗಳಲ್ಲಿ ತಮಗೆ ಭದ್ರತೆ ಲೋಪವಾಗುತ್ತಿದೆ ಎಂದಿದ್ದಾರೆ. ಮಾರ್ಚ್ 30ರ ಘಟನೆಯ ಬಗ್ಗೆ ವಿವರಿಸಿದ ಅವರು, ನಾಮಪತ್ರ ಸಲ್ಲಿಸಿ ಪೆರಂಬೂರಿನಿಂದ ಕೊಲತ್ತೂರಿಗೆ ಪ್ರಯಾಣಿಸುವಾಗ ಸರಿಯಾದ ಪೊಲೀಸ್ ಬೆಂಗಾವಲು ಇರಲಿಲ್ಲ. ಟ್ರಾಫಿಕ್ ನಿರ್ವಹಣೆಯೂ ಸರಿಯಾಗಿರದ ಕಾರಣ ಬೆಂಗಾವಲು ಪಡೆ ಸರಿಯಾಗಿ ಜೊತೆಯಾಗಿ ಬರೋದಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯದಿಂದ ತಮಗೆ ವೈ ಸೆಕ್ಯರಿಟಿಗೆ ಸೂಚನೆ ನೀಡಲಾಗಿದ್ದು, ಸೆಕ್ಯುರಿಟಿ ಪ್ರೊಟೊಕಾಲ್ ಪ್ರಕಾರ ಭದ್ರತೆ ಬೇಕಿರುವ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಚುನಾವಣಾ ಪ್ರಾಧಿಕಾರದಿಂದ ಸರಿಯಾದ ಅನುಮತಿ ನಂತರವೇ ಪ್ರಚಾರ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ವಿಜಯ್ ತಿಳಿಸಿದ್ದಾರೆ.

Source : News18 Kannada

1 hour ago

Home Flash News