Adulterated Milk: ಕೋಲಾರದಲ್ಲಿ ಕಲಬೆರಕೆ ಹಾಲು! 48 ಕಡೆ ದಾಳಿ, 18 ಡೈರಿಗಳು ಲಾಕ್ ಮಾಡ್ಲು ಡಿಸಿ ಆದೇಶ!
ಕೋಲಾರ: ಮನುಷ್ಯನ ಪ್ರತಿ ನಿತ್ಯದ ಜೀವನದಲ್ಲಿ ಹಾಲು ಮಹತ್ವದ ಪಾತ್ರ (Importance of Milk) ವಹಿಸುತ್ತದೆ. ಹಾಲಿನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶ ಇರುತ್ತದೆ. ಆದರೆ ಕುಡಿಯುವ ಹಾಲಿನ ಕಲಬೆರಕೆ (Milk Adulteration) ನಡೆಯುತ್ತಿದೆ ಅನ್ನೋ ಭಯಾನಕ ಅಂಶ ಬೆಳಕಿಗೆ ಬಂದಿದೆ. ಕೋಲಾರದಲ್ಲಿ (Kolar News) ಕಲಬೆರಕೆ ಹಾಲು ಉತ್ಪಾದನೆ ಕೇಸ್‌ಗಳು ಹೆಚ್ಚಾಗಿವೆ. ಕೆಮಿಕಲ್ ಮಿಶ್ರಿತ ಹಾಲು ತಯಾರಿಕೆಗೆ ದಂಧೆಕೋರರು ರಾಸಾಯನಿಕ ಬಣ್ಣ, ಎಣ್ಣೆ ಹಾಗೂ ಹಾಲಿನ ಪುಡಿ ಬಳಸಿ ಕಲಬೆರಕೆ ಹಾಲು ತಯಾರಿಸುತ್ತಿದ್ದಾರೆ. ಮುಳಬಾಗಿಲು, ಕೆಜಿಎಫ್‌ನ (Mulbagal and KGF) 3 ಕಡೆ ದಾಳಿ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.
ಗಡಿ ಭಾಗದ ಹಳ್ಳಿಗಳಲ್ಲಿ ನಾಯಿ ಕೊಡೆಗಳಂತೆ ತೆರದಿರುವ ಖಾಸಗಿ ಡೈರಿಗಳಲ್ಲಿ ಕಲಬೆರಕೆ ಹಾಲು ಪೂರೈಕೆ ಆಗ್ತಿರುವ ಮಾಹಿತಿ ಇದೆ. ಇದೇ ಕಾರಣಕ್ಕೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ಕೂಡ ನಡೆಸಿದ್ದಾರೆ. ಕಳೆದ ಫೆಬ್ರವರಿ 5 ರಂದು 30 ತಂಡಗಳಾಗಿ 48 ಕಡೆ ದಾಳಿ ಮಾಡಿ, ಹಾಲಿನ ಮಾದರಿ ಸಂಗ್ರಹ ಮಾಡಿದ್ದರು. ಇದೀಗ ಪ್ರಯೋಗಾಲಯದ ವರದಿ ಬಂದಿದ್ದು, ಸ್ಫೋಟಕ ಅಂಶ ಬಯಲಾಗಿದೆ. 48 ಹಾಲು ಮಾದರಿಯಲ್ಲಿ 18 ಮಾದರಿಗಳು ಕಲಬೆರಕೆ ಅನ್ನೋದು ದೃಢವಾಗಿದೆ. ಇದೀಗ 18 ಸಂಗ್ರಹಣ ಕೇಂದ್ರ ಬಂದ್ ಮಾಡಿ ಡಿಸಿ ಆದೇಶ ಮಾಡಿದ್ದಾರೆ.