Fact Check: ಏಪ್ರಿಲ್ 15 ರಿಂದ ಭಾಗಶಃ ಲಾಕ್‌ಡೌನ್? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸರ್ಕಾರದ ಪ್ರಕಟಣೆ ಪೋಸ್ಟ್
ಅಮೆರಿಕ-ಇರಾನ್ ಯುದ್ಧದ ಬಿಕ್ಕಟ್ಟು ಹೆಚ್ಚಿದ್ದು, ವಿಶ್ವದ ಅನೇಕ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿದೆ. ಭಾರತಕ್ಕೂ (India) ಯುದ್ಧದ ಬಿಸಿ ತಟ್ಟಿದ್ದು, ಅನಿಲ ಅಭಾವ ಉಂಟಾಗಿದೆ. ತೈಲ ಸಮಸ್ಯೆ ಹೆಚ್ಚುತ್ತಿದ್ದು, ಬೆಲೆಗಳು ಗಗನಕ್ಕೇರುತ್ತಿದೆ. ಆದ್ರೂ ಅಮೆರಿಕ ಅಧ್ಯಕ್ಷ ಟ್ರಂಪ್ (Trump) ಕದನ ವಿರಾಮ ಘೋಷಣೆ ಮಾಡೋ ಲಕ್ಷಣವೇ ಕಾಣ್ತಿಲ್ಲ. ಇದರ ನಡುವೆ ಮತ್ತೆ ಲಾಕ್ ಡೌನ್ (Lockdown) ಪರಿಸ್ಥಿತಿ ಬಗ್ಗೆ ಕೇಂದ್ರ ನಾಯಕರು ಎಚ್ಚರಿಸುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ (Social Media) ಈ ಪದ ಟ್ರೆಂಡಿಂಗ್ ಆಗಿದೆ. ಏಪ್ರಿಲ್ 15ರಿಂದ ಭಾರತದಲ್ಲಿ ಭಾಗಶಃ ಲಾಕ್‌ಡೌನ್ ಪೋಸ್ಟ್ ಒಂದು ಫುಲ್ ವೈರಲ್ ಆಗಿದೆ. ಇದರ ಹಿಂದಿನ ಅಸಲಿ ಸತ್ಯ ಏನು?
ಏಪ್ರಿಲ್ 15 ರಿಂದ ದೇಶದಲ್ಲಿ ಭಾಗಶಃ ಲಾಕ್‌ಡೌನ್ ಜಾರಿಗೆ ಬರುತ್ತದೆಯೇ ಎಂಬ ಪೋಸ್ಟ್ ಬಗ್ಗೆ ಇದೀಗ ಭಾರೀ ಚರ್ಚೆಯಾಗ್ತಿದೆ. ವೈರಲ್ ಪೋಸ್ಟ್ನಲ್ಲಿ ಕೆಲ ಅಂಶಗಳನ್ನ ಉಲ್ಲೇಖಿಸಲಾಗಿದ್ದು, ''ಏಪ್ರಿಲ್ 15 ರಿಂದ ಜಾರಿಗೆ ಬರಲಿರುವ ಭಾಗಶಃ ಲಾಕ್ ಡೌನ್ ಕುರಿತು ದೆಹಲಿ ಸರ್ಕಾರದ ಪತ್ರಿಕಾ ಪ್ರಕಟಣೆ'' ಎಂಬ ಹೆಡ್ ಲೈನ್ ಇದೆ. ಜೊತೆಗೆ ರಾಷ್ಟ್ರೀಯ ಲಾಂಛನವಿದ್ದು, ಇದು ನಿಜವಾದ ಸರ್ಕಾರಿ ದಾಖಲೆಯಂತೆ ಕಾಣುತ್ತಿದೆ. ಇದರಲ್ಲಿ ದೆಹಲಿ ಸರ್ಕಾರದ ಹೆಸರೂ ಇರೋದ್ರಿಂದ ಅನೇಕರು ಈ ಪೋಸ್ಟ್ ಕಂಡು ಶಾಕ್ ಆಗಿದ್ದಾರೆ.