... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಯುದ್ಧ ಇನ್ನೂ ನಿಂತಿಲ್ಲ, ಇರಾನ್​​ನನ್ನು ಶಿಲಾಯುಗಕ್ಕೆ ತಳ್ತೇವೆ -ಟ್ರಂಪ್ ಮತ್ತೆ ವಾರ್ನಿಂಗ್

ಯುದ್ಧ ಇನ್ನೂ ನಿಂತಿಲ್ಲ, ಇರಾನ್​​ನನ್ನು ಶಿಲಾಯುಗಕ್ಕೆ ತಳ್ತೇವೆ -ಟ್ರಂಪ್ ಮತ್ತೆ ವಾರ್ನಿಂಗ್

ಟ್ರಂಪ್ ತಮ್ಮ ಭಾಷಣದಲ್ಲಿ ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಯುದ್ಧ ಇನ್ನೂ ಮುಗಿದಿಲ್ಲ. ನಮ್ಮ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಯಶಸ್ವಿಯಾಗಿ ಮುಂದುವರಿಯುತ್ತಿದೆ. ಮುಂದಿನ 2 ರಿಂದ 3 ವಾರಗಳಲ್ಲಿ ಅಮೆರಿಕ ಅತ್ಯಂತ ಕಠಿಣ ನಿಲುವನ್ನು ತಳೆಯಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದರು. ನಾವು ಇರಾನ್ ಮೇಲೆ ಎಷ್ಟು ಭೀಕರವಾಗಿ ಪ್ರಹಾರ ಮಾಡಲಿದ್ದೇವೆ ಎಂದರೆ, ಅವರನ್ನು ಮತ್ತೆ ಅವರು ಮೊದಲು ಇದ್ದಂತಹ Stone Ageಗೆ ತಳ್ಳುತ್ತೇವೆ ಎಂದು ಅತ್ಯಂತ ಕಟು ಶಬ್ದಗಳಲ್ಲಿ ಎಚ್ಚರಿಸಿದ್ದಾರೆ. ಇದನ್ನೂ ಓದಿ:ಮದ್ವೆಯಾಗಿ ತಿಂಗಳಲ್ಲೇ ಸೊಸೆಯ ಕರಾಳ ಮುಖ ರಿವೀಲ್.

 ಅತ್ತೆಗೆ ಖಿಚಡಿಯಲ್ಲಿ ಫಿನೈಲ್ ಬೆರಸಿ ಮಾಡಿದ ಕೆಲಸ ಎಂಥದ್ದು? ಇರಾನ್ ಒಂದು ವೇಳೆ ಮಾತುಕತೆಗೆ ಅಥವಾ ಒಪ್ಪಂದಕ್ಕೆ ಬರದಿದ್ದರೆ ಆಗುವ ಅನಾಹುತಗಳ ಬಗ್ಗೆಯೂ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನ್ ಒಪ್ಪಂದಕ್ಕೆ ತಯಾರಾಗದಿದ್ದರೆ, ಅವರ ದೇಶದ ಎಲ್ಲಾ ವಿದ್ಯುತ್ ಉತ್ಪಾದನಾ ಘಟಕಗಳ (Power Plants) ಮೇಲೆ ನಾವು ಏಕಕಾಲಕ್ಕೆ ಭೀಕರ ದಾಳಿ ನಡೆಸಲಿದ್ದೇವೆ ಎಂದು ಬೆದರಿಕೆ ಹಾಕಿದ್ದಾರೆ. ಇರಾನ್ ಈಗ ಅಕ್ಷರಶಃ ಅಸಹಾಯಕವಾಗಿದೆ ಎಂದು ಪ್ರತಿಪಾದಿಸಿದ ಟ್ರಂಪ್, ಕಳೆದ 4 ವಾರಗಳ ಸಾಧನೆಯನ್ನು ವಿವರಿಸಿದರು. ಕಳೆದ ಒಂದು ತಿಂಗಳಲ್ಲಿ ಅಮೆರಿಕದ ಸೈನ್ಯವು ಯುದ್ಧಭೂಮಿಯಲ್ಲಿ ಹಿಂದೆಂದೂ ಕಾಣದಂತಹ ನಿರ್ಣಾಯಕ ಜಯ ಸಾಧಿಸಿದೆ.

 ಇರಾನ್‌ನ ನೌಕಾಪಡೆ ಮತ್ತು ವಾಯುಪಡೆ ಈಗಾಗಲೇ ಸಂಪೂರ್ಣವಾಗಿ ನಾಶವಾಗಿದೆ. ಇರಾನ್‌ನ ಪ್ರಮುಖ ನಾಯಕರು ಈಗ ಹತರಾಗಿದ್ದಾರೆ. 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (IRGC) ಮೇಲಿನ ಅವರ ಹಿಡಿತ ಸಂಪೂರ್ಣವಾಗಿ ತಪ್ಪಿಹೋಗಿದೆ. ಇರಾನ್‌ನಲ್ಲಿ ಅಧಿಕಾರ ಬದಲಾವಣೆಯ ಕುರಿತು ಮಾತನಾಡಿದ ಟ್ರಂಪ್, ನಮ್ಮ ಗುರಿ ಎಂದಿಗೂ ಅಲ್ಲಿನ ಸತ್ತಾ ಬದಲಾವಣೆ ಮಾಡುವುದಾಗಿರಲಿಲ್ಲ. ಆದರೆ ಅಲ್ಲಿನ ಸುಪ್ರೀಂ ಲೀಡರ್ ಸಾವಿನ ನಂತರ ಪರಿಸ್ಥಿತಿ ಬದಲಾಗಿದೆ ಮತ್ತು ಅಲ್ಲಿ ಅಧಿಕಾರ ಬದಲಾವಣೆಯಾಗಿದೆ. ಯುದ್ಧದ ಇತಿಹಾಸದಲ್ಲೇ ಇಷ್ಟು ಕಡಿಮೆ ಅವಧಿಯಲ್ಲಿ ಯಾವುದೇ ಶತ್ರು ರಾಷ್ಟ್ರಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಹಾನಿ ಉಂಟಾಗಿಲ್ಲ ಎಂದು ಟ್ರಂಪ್ ತಮ್ಮ ಭಾಷಣದಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Source : News First

2 hours ago

Home Flash News