... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ

ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ

ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ನಡೆಸಿದಾಗ, ಜಾಗತಿಕ ರಾಷ್ಟ್ರಗಳಿಗೆ ತೈಲ ಪೂರೈಕೆಯಲ್ಲಾಗುವ ಅಡಚಣೆಯ ಬಗ್ಗೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿತು. ಯುದ್ಧ ಸ್ಫೋಟಗೊಳ್ಳುತ್ತಿದ್ದಂತೆಯೇ ಕಚ್ಚಾ ತೈಲ ಬೆಲೆ ಏರಿಕೆಯಾಯಿತು. ತೈಲ ಹೊತ್ತ ಹತ್ತಾರು ಹಡಗುಗಳು ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡವು. ಇಡೀ ವಿಶ್ವದ ತೈಲ ಪೂರೈಕೆ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿತು. ಇದರ ನಡುವೆ ಹೆಚ್ಚು ಗಮನ ಸೆಳೆಯದ, ಆದರೆ ಗಂಭೀರವಾದ ಪರಿಣಾಮ ಬೀರುವ ವಿಷಯವೆಂದರೆ ಹೀಲಿಯಂ ಪೂರೈಕೆಯಲ್ಲಿನ ವ್ಯತ್ಯಯ. 

ಪಶ್ಚಿಮ ಏಷ್ಯಾ ಸಂಘರ್ಷವು ನೈಸರ್ಗಿಕ ಅನಿಲ ಮೂಲಸೌಕರ್ಯ ಮತ್ತು ಹಡಗು ಮಾರ್ಗಗಳಿಗೆ ಅಡ್ಡಿಪಡಿಸುತ್ತಿರುವುದರಿಂದ, ಇದರ ಪ್ರಭಾವವು ಉನ್ನತ ತಂತ್ರಜ್ಞಾನ ವಲಯಗಳಿಗೆ ಅದರಲ್ಲೂ ವಿಶೇಷವಾಗಿ ಸೆಮಿಕಂಡಕ್ಟರ್ ತಯಾರಿಕೆ ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ಕ್ಷೇತ್ರಕ್ಕೆ ವಿಸ್ತರಿಸಲು ಪ್ರಾರಂಭಿಸಿದೆ. ಡೇಟಾ ಸೆಂಟರ್‌, ಸ್ಮಾರ್ಟ್‌ಫೋನ್‌ ಮತ್ತು ಎಂ.ಆರ್‌.ಐ ಯಂತ್ರಗಳ ತಯಾರಿಕೆಗೆ ಇದರ ಬಿಸಿ ಮುಟ್ಟಿದೆ. ಹೀಲಿಯಂ ಸ್ವತಂತ್ರವಾಗಿ ಉತ್ಪತ್ತಿಯಾಗುವುದಿಲ್ಲ. ಅದು ನೈಸರ್ಗಿಕ ಅನಿಲ ಸಂಸ್ಕರಣೆಯ ಉಪ-ಉತ್ಪನ್ನ. ಕ್ರಯೋಜೆನಿಕ್ ಡಿಸ್ಟಿಲೇಶನ್ ಪ್ರಕ್ರಿಯೆ ಮೂಲಕ ಹೀಲಿಯಂ ಅನ್ನು ಹೊರತೆಗೆಯಲಾಗುತ್ತದೆ.

 ಎಲ್‌ಎನ್‌ಜಿ ಉತ್ಪಾದನೆ ನಿಂತಾಗ, ಹೀಲಿಯಂ ಉತ್ಪಾದನೆಯೂ ಅದರೊಂದಿಗೆ ಸ್ಥಗಿತವಾಗುತ್ತದೆ. ಜಗತ್ತಿಗೆ ಪೂರೈಕೆಗಾಗುವ ಹೀಲಿಯಂನ ಬಹುಭಾಗ ಉತ್ಪತ್ತಿಯಾಗುವುದು ಇರಾನ್ ಹಾಗೂ ಕತಾರ್‌ನಲ್ಲಿ. ಈ ದೇಶಗಳ ಜಂಟಿ ಹಿಡಿತದಲ್ಲಿರುವ ಸೌತ್ ಪಾರ್ಸ್/ನಾರ್ತ್ ಡೋಮ್‌ ಇದು ವಿಶ್ವದ ಅತಿ ದೊಡ್ಡ ಅನಿಲ ನಿಕ್ಷೇಪಗಳಲ್ಲಿ ಒಂದು. ಜಾಗತಿಕ ಹೀಲಿಯಂ ರಫ್ತಿನಲ್ಲಿ ಕತಾರ್ ಮಾತ್ರವೇ ಸುಮಾರು ಶೇ 30-33 ರಷ್ಟು ಪಾಲನ್ನು ಹೊಂದಿದೆ. ಹೀಗಾಗಿ ಕೊಲ್ಲಿ ಪ್ರದೇಶವು ಜಾಗತಿಕ ಹೀಲಿಯಂ ಪೂರೈಕೆ ಸರಪಳಿಗೆ ಅನಿವಾರ್ಯವಾಗಿದೆ. ಮೂಲಸೌಕರ್ಯ ಸ್ಥಗಿತ, ನಿರ್ಬಂಧಗಳು ಅಥವಾ ಸಾಗಣೆ ಅಡೆತಡೆಗಳ ಮೂಲಕ ವ್ಯತ್ಯಯ ಉಂಟಾದರೆ ಹೀಲಿಯಂ ಕೊರತೆ ಉಂಟಾಗಲಿದೆ.

Source : Prajavani

1 hour ago

Home Flash News