Vijay-TVK: ವಿಜಯ್ ತಿರುಚ್ಚಿ ನಾಮಿನೇಷನ್ ರೋಡ್ ಶೋ ವೇಳೆ ಬೈಕ್ನಿಂದ ಬಿದ್ದ ಜೋಡಿ
ಕಾಲಿವುಡ್ (Kollywood) ಸ್ಟಾರ್ ನಟ, ಟಿವಿಕೆ ಮುಖಂಡ ವಿಜಯ್ (Vijay) ಅವರು ವಿಧಾನಸಭಾ ಚುನಾವಣೆಗೆ ಭರ್ಜರಿಯಾಗಿ ರೆಡಿಯಾಗುತ್ತಿದ್ದಾರೆ. ಇತ್ತೀಚೆಗೆ ಪೆರಂಬೂರಿನಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ನಂತರ ನಟ ತಿರುಚ್ಚಿ ಪೂರ್ವದಿಂದ ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ನಾಮಪತ್ರ ಸಲ್ಲಿಕೆಗೂ ಮೊದಲು ಗ್ರ್ಯಾಂಡ್ ರೋಡ್ ಶೋ ನಡೆದಿದೆ. ಆದರೆ ಈ ವೇಳೆ ಜೋಡಿಯೊಂದು ಬೈಕ್ನಿಂದ ಬಂದಿದ್ದು ತಕ್ಷಣ ಇಳಿದು ಬಂದ ವಿಜಯ್ ಅವರು ಬೈಕ್ನಿಂದ ಬಿದ್ದವರನ್ನು ಎಬ್ಬಿಸಿ ವಿಚಾರಿಸಿದ್ದಾರೆ.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಗುರುವಾರ ತಿರುಚ್ಚಿಯಲ್ಲಿ ನಡೆದ ರೋಡ್ ಶೋನಲ್ಲಿ ಅನಿರೀಕ್ಷಿತವಾಗಿ ನಿಂತು, ಬೈಕ್ನಿಂದ ಬಿದ್ದ ದಂಪತಿಯನ್ನು ವಿಚಾರಿಸಿಕೊಂಡರು. ಈ ಒಂದು ಮೊಮೆಂಟ್ನ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ವಿಜಯ್ ತಿರುಚ್ಚಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಭಾರಿ ಜನಸಮೂಹ ಜಮಾಯಿಸಿ ಅವರ ಬೆಂಗಾವಲು ಪಡೆಯನ್ನು ಹಿಂಬಾಲಿಸಿತು. ರೋಡ್ ಶೋ ಸಾರ್ವಜನಿಕ ಕಾರ್ಯಕ್ರಮವಾಗಿ ಪರಿವರ್ತನೆಯಾಗಿತ್ತು.
ಚೆನ್ನೈನಿಂದ ತಿರುಚ್ಚಿಗೆ ಬಂದಿಳಿದ ವಿಜಯ್ ಅವರನ್ನು ವಿಮಾನ ನಿಲ್ದಾಣದ ಹೊರಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಸ್ವಾಗತಿಸಿದರು. ನಂತರ ನಟ ಅಲ್ಲಿಂದ ರೋಡ್ ಶೋ ನಡೆಸಿದರು. ಜನ ಬೀದಿಗಳಲ್ಲಿ ಸಾಲುಗಟ್ಟಿ ನಿಂತಿದ್ದಾಗ ವಾಹನದ ಸನ್ರೂಫ್ನಿಂದ ಬೆಂಬಲಿಗರತ್ತ ಕೈ ಬೀಸುತ್ತಾ ಬರುತ್ತಿದ್ದರು ವಿಜಯ್.
ಬೆಂಗಾವಲು ಪಡೆಯ ಓಡುತ್ತಾ ವಿಜಯ್ ಅವರನ್ನು ಅಭಿಮಾನಿಗಳು ಹುರಿದುಂಬಿಸುತ್ತಿದ್ದರು. ವೈರಲ್ ಆಗುತ್ತಿರುವ ಒಂದು ಕ್ಲಿಪ್ನಲ್ಲಿ, ವಿಜಯ್ ಅವರ ಭದ್ರತಾ ತಂಡವು ಪ್ರತಿಕ್ರಿಯಿಸುವ ಮೊದಲೇ ಅವರು ತಮ್ಮ ಕಡೆಗೆ ಎಸೆದ ಸ್ಕಾರ್ಫ್ ಅನ್ನು ಹಿಡಿಯುತ್ತಿರುವುದು ಕಂಡುಬರುತ್ತದೆ.