... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
'ಸತೀಶಣ್ಣ ಸಣ್ಣ ಮಗುವಿದ್ದಂತೆ, ಸಮುದಾಯಕ್ಕೆ ಅನ್ಯಾಯವಾದಗಲೂ ಕೇಳಲ್ಲ':

'ಸತೀಶಣ್ಣ ಸಣ್ಣ ಮಗುವಿದ್ದಂತೆ, ಸಮುದಾಯಕ್ಕೆ ಅನ್ಯಾಯವಾದಗಲೂ ಕೇಳಲ್ಲ': ಜಾರಕಿಹೊಳಿ ವಿರುದ್ಧ ಶ್ರೀರಾಮುಲು ವಾಗ್ದಾಳಿ!

ಬಾಗಲಕೋಟೆ (ಏ.07): 'ಸತೀಶಣ್ಣ (ಸಚಿವ ಸತೀಶ್ ಜಾರಕಿಹೊಳಿ) ಎಷ್ಟು ಒಳ್ಳೆಯವನೆಂದರೆ, ಒಂದು ಸಣ್ಣ ಮಗು ಎಷ್ಟು ಮುಗ್ಧವೋ ಅಷ್ಟು ಒಳ್ಳೆಯವನು. ಆ ಮಗುವಿಗೆ ಹೇಗೆ ಒಳ್ಳೆಯದು ಮತ್ತು ಕೆಟ್ಟದ್ದು ಯಾವುದು ಎಂದು ತಿಳಿಯುವುದಿಲ್ಲವೋ, ಸತೀಶಣ್ಣ ಅವರಿಗೂ ಹಾಗೆಯೇ ಆಗಿದೆ. ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾದಾಗ ಪ್ರಶ್ನೆ ಮಾಡದ ನೀವು, ಉಪ ಚುನಾವಣೆಯಲ್ಲಿ ಫೇಲ್ ಆಗುವುದು ಗ್ಯಾರಂಟಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಕ್ರೋಶ ಹೊರಹಾಕಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಸತೀಶ ಜಾರಕಿಹೊಳಿ ಅವರನ್ನು ನೇರವಾಗಿ ಪ್ರಶ್ನಿಸಿದರು. 'ನೀವು ಕಾಂಗ್ರೆಸ್‌ನಲ್ಲಿ ಬಹಳ ದೊಡ್ಡ ನಾಯಕರು. ಮುಂದಿನ ಮುಖ್ಯಮಂತ್ರಿ ಆಗುವ ರೇಸ್‌ನಲ್ಲೂ ಇದ್ದೀರಿ. 

ಇಷ್ಟೆಲ್ಲಾ ಬೆಳೆದಿರುವ ನೀವು, ಸ್ವತಃ ನಿಮ್ಮದೇ ಸಮುದಾಯಕ್ಕೆ ಇಷ್ಟೊಂದು ಅನ್ಯಾಯವಾದಾಗ ಯಾಕೆ ಬಾಯಿ ಬಿಡುತ್ತಿಲ್ಲ? ಸತೀಶಣ್ಣ ಅವರೇ, ಇಷ್ಟೊಂದು ಮೌನಕ್ಕೆ ಕಾರಣವೇನು?' ಎಂದು ಪ್ರಶ್ನಿಸುವ ಮೂಲಕ ಅವರ ನಾಯಕತ್ವವನ್ನು ಕೆಣಕಿದ್ದಾರೆ. 187 ಕೋಟಿ ಭ್ರಷ್ಟಾಚಾರ ಮತ್ತು ಮೂಲಭೂತ ಸೌಕರ್ಯದ ಕೊರತೆ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂಪಾಯಿಗಳ ಬೃಹತ್ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ ಶ್ರೀರಾಮುಲು, 'ಸಮುದಾಯದ ಹಣ ಲೂಟಿಯಾಗಿದೆ. ಬಡ ಮಕ್ಕಳಿಗೆ ಸ್ಕಾಲರ್‌ಶಿಪ್ ಇಲ್ಲ, ಸಮವಸ್ತ್ರದ ಜೊತೆಗೆ ನೀಡಬೇಕಾದ ಸಾಕ್ಸ್ ಮತ್ತು ಬೂಟುಗಳೂ ಇಲ್ಲ. ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದ್ದರೂ ನೀವು ಮೌನಕ್ಕೆ ಶರಣಾಗಿದ್ದೀರಿ. ಮೀಸಲಾತಿ ವಿಷಯದಲ್ಲೂ ಸಮುದಾಯಕ್ಕೆ ಹಿನ್ನಡೆಯಾದಾಗ ನೀವು ಧ್ವನಿ ಎತ್ತಲಿಲ್ಲ. ಅನ್ಯಾಯವಾದಾಗ ಮಾತನಾಡದವರು ಈಗ ಮತ ಕೇಳಲು ಯಾವ ಹಕ್ಕಿನಿಂದ ಬರುತ್ತೀರಿ?' ಎಂದು ಆಕ್ರೋಶ ಹೊರಹಾಕಿದರು.

Source : Asianet News

1 hour ago

Home Flash News