ಬಂಗಾರ ದುಪ್ಪಟ್ಟು ಉತ್ಪಾದನೆ ದಾಖಲೆ ಬರೆದ ದ. ಏಷ್ಯಾದ ಪ್ರತಿಷ್ಠಿತ ಏಕೈಕ ಸರ್ಕಾರಿ ಸ್ವಾಮ್ಯದ ರಾಯಚೂರು ಹಟ್ಟಿ ಗಣಿ!
ವರದಿ: ಬಲಭೀಮರಾವ್ ಕುಲಕರ್ಣಿದಕ್ಷಿಣ ಏಷ್ಯಾದ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿ ಕಂಪನಿಯು 2025-26ನೇ ಸಾಲಿನಲ್ಲಿ 1691.575 ಕೆಜಿ ಚಿನ್ನ ಉತ್ಪಾದಿಸಿ ದಾಖಲೆ ನಿರ್ಮಿಸಿದೆ. ಕೊನೆಯ ನಾಲ್ಕು ತಿಂಗಳಲ್ಲಿ ಉತ್ಪಾದನೆ ಭಾರಿ ಚೇತರಿಕೆ ಕಂಡು, ಕಳೆದ ವರ್ಷದ ₹430 ಕೋಟಿ ಲಾಭವನ್ನು ದುಪ್ಪಟ್ಟುಗೊಳಿಸಿದೆ. ರಾಯಚೂರು: 2025-26 ನೇ ಆರ್ಥಿಕ ವರ್ಷಕ್ಕೆ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಸರ್ಕಾರಿ ಸ್ವಾಮ್ಯದ ಏಕೈಕ ಹಟ್ಟಿ ಚಿನ್ನದಗಣಿ ಕಂಪನಿ 1691 ಕೆಜಿ 575 ಗ್ರಾಂ ಚಿನ್ನ ಉತ್ಪಾದಿಸಿ ದಾಖಲೆ ಮೆರೆದಿದೆ. 6 ಲಕ್ಷ 49 ಸಾವಿರ 690 ಮೆಟ್ರಿಕ್ ಟನ್ ಅದಿರನ್ನು ಕಂಪನಿ ಭೇದಿಸಿದೆ.
1700 ಕೆಜಿ ಚಿನ್ನ ಉತ್ಪಾದನೆ ಗುರಿ ಹೊಂದಿದ್ದು, 772.190 ಕೆಜಿ ಚಿನ್ನ ಉತ್ಪಾದನೆಯಾಗಿದ್ದು, 1691 ಕೆಜಿ 575 ಗ್ರಾಂ ಚಿನ್ನ ಉತ್ಪಾದಿಸಿ ಕೆಜಿ ಚಿನ್ನ ಉತ್ಪಾದಿಸಿ 99ರಷ್ಟು ಪ್ರಗತಿ ಸಾಧಿಸಿದೆ.ಪ್ರತಿ ಟನ್ ಅದಿರಿನಲ್ಲಿ 2.57 ಗ್ರಾಮ್ ಉತ್ಪಾದನೆ ಗುರಿ ಹೊಂದಿದ್ದು, ಪ್ರತಿ ಟನ್ನಿಗೆ ಹೆಚ್ಚುವರಿಯಾಗಿ 2.90 ಗ್ರಾಮ್ ಹಳದಿ ಲೋಹ ಉತ್ಪಾದನೆ ಸಾಧನೆಯಾಗಿದೆ. ಏಪ್ರಿಲ್‌ನಲ್ಲಿ 113.011, ಮೇ 104.737, ಜೂನ್ 75.945, ಜುಲೈ 94.238, ಆಗಸ್ಟ್ 119.405 ಸೆಪ್ಟೆಂಬರ್ 83.018, ಅಕ್ಟೋಬರ್ 91.201, ನವೆಂಬರ್‌ನಲ್ಲಿ 86.978 ಪ್ರಾರಂಭದ 8 ತಿಂಗಳಲ್ಲಿ ಮಂದಗತಿಯಲ್ಲಿ ಸಾಗಿದ್ದ ಉತ್ಪಾದನೆ ಚೇತರಿಸಿಕೊಂಡು, ಕೊನೆಯ ನಾಲ್ಕು ತಿಂಗಳು ಡಿಸೆಂಬರ್ 133.ಕೆ.ಜಿ, ಜನವರಿ 246.076 ಕೆ.ಜಿ, ಫೆಬ್ರವರಿ 257.121 ಹಾಗೂ ಮಾರ್ಚ್ ತಿಂಗಳಲ್ಲಿ 286.839 ಕೆ.ಜಿ ಚಿನ್ನ ಉತ್ಪಾದಿಸಿದೆ.