ರಾವಣನ ಹಣ್ಣು ರಾಮ ಕದ್ದ: ಪ್ರಕಾಶ್ ರಾಜ್ ಹೊಸ ರಾಮಾಯಣ ಸ್ಟೋರಿ; ಗೋಮಾಂಸ ಹಬ್ಬ- FIR ದಾಖಲು
ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್‌ಟಿಗೆ ಹೋಲಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ನಟ ಪ್ರಕಾಶ್ ರಾಜ್ ಅವರಿಗೆ ಕಾಂಟ್ರವರ್ಸಿ ಮೂಲಕ ಫೇಮಸ್ ಆಗುವುದು ಎಂದರೆ ಇನ್ನಿಲ್ಲದ ಖುಷಿ. ಸದಾ ಬಿಜೆಪಿ, ಕೇಂದ್ರ ಸರ್ಕಾರ, ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಲೇ ಒಂದಷ್ಟು ವರ್ಗವನ್ನು ಓಲೈಸಲು, ತಮ್ಮ ಮೇಲೆ ಕೇಸ್ ಆದರೂ ಏನೂ ಆಗುವುದಿಲ್ಲ ಎನ್ನುವ ಬಂಢ ಧೈರ್ಯದಿಂದಲೇ ಹಿಂದೂಗಳ ವಿರುದ್ಧವೂ ಸಾಕಷ್ಟು ಚರ್ಚಾಸ್ಪದ ಮಾತುಗಳನ್ನು ಆಡುತ್ತಲೇ ಇರುತ್ತಾರೆ.
ಅದರಲ್ಲಿ ಇದೀಗ ಕೇರಳಿಗರ ಓಲೈಕೆಗೆ, ಅವರ ಚಪ್ಪಾಳೆ ಗಿಟ್ಟಿಸಲು ಅಲ್ಲಿ ಕೆಲವು ಮಾತನಾಡಿದ್ದು, ಇದೀಗ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ ಎನ್ನಲಾಗುತ್ತಿದೆ. ಶ್ರೀರಾಮ ಉತ್ತರ ಭಾರತದವನು ಹಾಗೆಯೇ ರಾವಣ ದಕ್ಷಿಣ ಭಾರತದ ಆದಿವಾಸಿ ಅಷ್ಟೇ. ರಾಮನು ದಕ್ಷಿಣ ಭಾರತದ ಜಮೀನಿಗೆ ನುಗ್ಗಿ ಹಣ್ಣನ್ನು ಕಿತ್ತು ತಿಂದಿದ್ದಾನೆ ಎನ್ನುವ ಮೂಲಕ ತಾವೇ ಸೃಷ್ಟಿಸಿರುವ ಕಥೆಯೊಂದನ್ನು ಹೇಳಿದ್ದಾರೆ. ರಾಮ, ಲಕ್ಷ್ಮಣ, ಸೀತೆ ದಕ್ಷಿಣ ಭಾರತಕ್ಕೆ ಅವರಿಗೆ ಒಂದು ತೋಟದಲ್ಲಿ ಹಣ್ಣುಗಳು ಕಾಣುತ್ತವೆ. ಆಗ ಲಕ್ಷ್ಮಣ ಆ ಹಣ್ಣುಗಳನ್ನು ನಾವು ತಿನ್ನಬಹುದೇ ಎಂದು ರಾಮನಲ್ಲಿ ಕೇಳಿದಾಗ, ರಾಮ ಹಸಿವಾಗಿದ್ದರೆ ತಿನ್ನು ಎನ್ನುತ್ತಾನೆ.
ಹಣ್ಣುಗಳನ್ನು ತಿನ್ನುವಾಗ, ಶೂರ್ಪನಕಿ ಹಾಗೂ ರಾವಣ ಬರುತ್ತಾರೆ. ಶೂರ್ಪನಕಿಗೆ ಸಿಟ್ಟು ಬಂದು ರಾವಣನಲ್ಲಿ ವಿಷಯ ಹೇಳುತ್ತಾಳೆ ಎಂದು ತಮ್ಮ ಸ್ಟೋರಿ ಆರಂಭಿಸಿದ್ದಾರೆ. ಬಳಿಕ, ರಾವಣ ಅವರಿಗೆ ಹಸಿವಾಗಿದೆ ಬಿಡು ತಿನ್ನಲಿ, ಆ ಮೇಲೆ ಮಾತಾಡೋಣ ಎನ್ನುತ್ತಾನೆ. ಅದಾದ ಬಳಿಕ ರಾವಣ, ಶೂರ್ಪನಕಿ ರಾಮ, ಲಕ್ಷ್ಮಣರ ಎದುರಿಗೆ ಹೋದಾಗ ರಾಮ ಯಾರೋ ಬುಡಕಟ್ಟ ಜನಾಂಗದವರು ಬಂದರು ಎನ್ನುತ್ತಾನೆ. ಹಣ್ಣುಗಳನ್ನು ತಿಂದಿದ್ದಕ್ಕೆ ಹಣ ನೀಡಬೇಕು ಎಂದು ರಾವಣ ಹೇಳುತ್ತಾನೆ. ಲೆಕ್ಕ ಮಾಡಿ 2000 ಸಾವಿರ ಡಾಲರ್ ಜೊತೆ ಜಿಎಸ್‌ಟಿ ಕಟ್ಟಬೇಕು ಎಂದು ಹೇಳುತ್ತಾನೆ ಎನ್ನುವುದು ಈ ಕಥೆಯ ಮುಂದುವರೆದ ಭಾಗ.