Select Location
All Locations
State
Region
City / District
SRH ವಿರುದ್ಧ ಸೋತರೂ IPL ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದ CSK!

SRH ವಿರುದ್ಧ ಸೋತರೂ IPL ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿದ CSK!

ಹೈದರಾಬಾದ್: ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ನಿನ್ನೆ (ಶನಿವಾರ) ನಡೆದ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 10 ರನ್‌ಗಳಿಂದ ಸೋಲು ಅನುಭವಿಸಿತು. ಆದರೆ, ಸೋಲಿನ ನಡುವೆಯೂ ಸಿಎಸ್‌ಕೆ ತಂಡವು ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ.  ಸಾಮಾನ್ಯವಾಗಿ ಯಾವುದೇ ತಂಡ ಸೋತ ಬಳಿಕ ಅಂಕಪಟ್ಟಿಯಲ್ಲಿ ಕುಸಿತ ಅಥವಾ ಅದೇ ಸ್ಥಾನದಲ್ಲಿ ಮುಂದುವರೆಯುವುದನ್ನು ಕಾಣಬಹುದು. ಆದರೆ, ಸಿಎಸ್‌ಕೆ ವಿಚಾರದಲ್ಲಿ ಅದು ಬದಲಾಗಿದೆ.

ಎಸ್‌ಆರ್‌ಎಚ್ ವಿರುದ್ಧದ ಪಂದ್ಯಕ್ಕೂ ಮುನ್ನ ಐಪಿಎಲ್ 2026 ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದ ಸಿಎಸ್‌ಕೆ ತಂಡವು ಸೋಲಿನ ಬಳಿಕ 7ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಪಂದ್ಯಕ್ಕೂ ಮುನ್ನ ಸಿಎಸ್‌ಕೆ ತಂಡ –0.846ರ ನೆಟ್ ರನ್‌ರೇಟ್‌ನೊಂದಿಗೆ (NRR) 8ನೇ ಸ್ಥಾನದಲ್ಲಿತ್ತು. ಆದರೆ, ಎಸ್‌ಆರ್‌ಎಚ್ ತಂಡದ ವಿರುದ್ಧ ಪೈಪೋಟಿ ನಡೆಸಿ ಕೇವಲ 10 ರನ್‌ಗಳಿಂದ ಸೋತ ಬಳಿಕ, ನೆಟ್ ರನ್‌ರೇಟ್ ಅನ್ನು –0.780ಕ್ಕೆ ಹೆಚ್ಚಿಸಿಕೊಂಡಿದೆ. ಈ ಸಣ್ಣ ಪ್ರಮಾಣದ ಬದಲಾವಣೆಯು ಸಿಎಸ್‌ಕೆ ತಂಡವನ್ನು 7ನೇ ಸ್ಥಾನಕ್ಕೆ ಏರುವಂತೆ ಮಾಡಿದೆ. 

ಇತ್ತ ಲಖನೌ ಸೂಪರ್‌ಜೈಟ್ಸ್‌ -0.804 ನೆಟ್‌ ರನ್‌ರೇಟ್‌ನೊಂದಿಗೆ 8ನೇ ಸ್ಥಾನಕ್ಕೆ ಕುಸಿದಿದೆ. ಈ ಪಂದ್ಯದಲ್ಲಿ ಶ್ರೀಲಂಕಾದ ವೇಗಿ ಇಶಾನ್ ಮಾಲಿಂಗ ಅಮೋಘ ಬೌಲಿಂಗ್ ದಾಳಿ ನಡೆಸಿ ಸಿಎಸ್‌ಕೆ ತಂಡದ ಪ್ರಮುಖ 3 ವಿಕೆಟ್‌ಗಳನ್ನು ಪಡೆದುಕೊಂಡರು. ಪರಿಣಾಮ ಸಿಎಸ್‌ಕೆ 10 ರನ್‌ಗಳ ಸೋಲು ಅನುಭಿಸಿತು. ಇದುವರೆಗೂ ಯಾವುದೇ ಸೋಲು ಕಾಣದ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.


Prajavani 1 hour ago
Home Flash News