Select Location
All Locations
State
Region
City / District
Viral News: 2 ವರ್ಷದ ಹಿಂದೆ ಓಡಿ ಹೋಗಿದ್ಲು, ಈಗ ವೋಟ್ ಹಾಕೋದಕ್ಕೆ ಬಂದ್ಲು! ಮತಗಟ್ಟೆಯಲ್ಲೇ ಹೆಂಡತಿಯನ್ನು ಹಿಡಿದ ಗಂಡ! ಮುಂದಾಗಿದ್ದೇನು?

Viral News: 2 ವರ್ಷದ ಹಿಂದೆ ಓಡಿ ಹೋಗಿದ್ಲು, ಈಗ ವೋಟ್ ಹಾಕೋದಕ್ಕೆ ಬಂದ್ಲು! ಮತಗಟ್ಟೆಯಲ್ಲೇ ಹೆಂಡತಿಯನ್ನು ಹಿಡಿದ ಗಂಡ! ಮುಂದಾಗಿದ್ದೇನು?

ಮತದಾನದ (Voting) ದಿನ ರಾಜ್ಯದ, ದೇಶದ ಭವಿಷ್ಯ ನಿರ್ಧಾರ ಆಗುತ್ತೆ ಅಂತಾರೆ. ಇಲ್ಲಿ ನೋಡಿದ್ರೆ ಓಡಿ ಹೋಗಿದ್ದ ಹೆಂಡ್ತಿ ಭವಿಷ್ಯ ನಿರ್ಧಾರ ಆಗೋ ರೀತಿಯ ಘಟನೆ ನಡೆದಿದೆ. ಇದು ಒಂಚೂರು ಸಿನಿಮ್ಯಾಟಿಕ್ ಅಂತನಿಸಿದರೂ ನಿಜಕ್ಕೂ ಅಚ್ಚರಿ ಮೂಡಿಸುವಂತಹ ಘಟನೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ಓಡಿ ಹೋದ ಹೆಂಡತಿ ಸಿಕ್ಕಿ ಬಿದ್ದ ಸ್ವಾರಸ್ಯಕರ ಘಟನೆಯ ಸ್ಟೋರಿ.

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಸಿಲಿಗುರಿ ಉಪವಿಭಾಗದ ಮತಿಗರಾ-ನಕ್ಸಲ್ಬರಿಯಲ್ಲಿ, ಫನ್ಸಿದೇವದ ತಾರಾಬರಿಯಲ್ಲಿರುವ ತಾರಾಬರಿ ಪ್ರಾಥಮಿಕ ಶಾಲೆಯಲ್ಲಿ ಏಪ್ರಿಲ್ 23 ರಂದು ಈ ಘಟನೆ ನಡೆದಿದೆ. ಆತ ಬೆಳಿಗ್ಗೆಯಿಂದ ಹೊರಗೆ ಕಾದು ನಿಂತಿದ್ದ. ತನ್ನ ಪತ್ನಿ ವೋಟ್ ಮಾಡೋಕೆ ಬಂದೇ ಬರ್ತಾಳೆ ಎಂದು ನಿರೀಕ್ಷಿಸಿದ್ದ.

2 ವರ್ಷಗಳ ಹಿಂದೆ ಬೇರೊಬ್ಬ ವ್ಯಕ್ತಿಯೊಂದಿಗೆ ಓಡಿ ಹೋದ ನಂತರ ಇಬ್ಬರು ಎರಡು ವರ್ಷಗಳ ಕಾಲ ಬೇರ್ಪಟ್ಟಿದ್ದರು. ಆದರೆ ಓಡಿ ಹೋದ ಹೆಂಡತಿ ವೋಟ್ ಮಾಡೋಕೆ ಬಂದೇ ಬರ್ತಾಳೆ ಅಂತ ಅವನು ನಂಬಿದ್ದ. ಮತಗಟ್ಟೆಯ ಹೊರಗೆ ಆತ ಕಾಯುತ್ತಲೇ ಇದ್ದ. ಮತದಾನ ಕೇಂದ್ರದಲ್ಲಿದ್ದ ಜನರು (ಬೂತ್ ಸಂಖ್ಯೆ 25/238) ಈತನನ್ನು ಗಮನಿಸುತ್ತಲೇ ಇದ್ದರು. ಆತ ತಾಳ್ಮೆಯಿಂದ ಯಾರೊಂದಿಗೂ ಮಾತನಾಡದೆ ಗಂಟೆಗಟ್ಟಲೆ ಅದೇ ಸ್ಥಳದಲ್ಲಿ ನಿಂತು ಕಾಯುತ್ತಿದ್ದ. ಸುಡುವ ಬಿಸಿಲು, ಬಾಯಾರಿಕೆ, ಸುಸ್ತು ಇದ್ದರೂ ಆತ ಅಲ್ಲಿಂದ ಕದಲಲಿಲ್ಲ.

ದಿ ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಪ್ರತ್ಯಕ್ಷದರ್ಶಿಗಳು ಆ ವ್ಯಕ್ತಿ ತುಂಬಾ ಶಾಂತವಾಗಿ ಕಾಣಿಸುತ್ತಿದ್ದರು ಎಂದಿದ್ದಾರೆ. ಸಮಯ ಕಳೆಯುತ್ತಲೇ ಇತ್ತು. ಮಧ್ಯಾಹ್ನ ಸುಮಾರು 2 ಗಂಟೆಗೆ, ಆತನ ಓಡಿ ಹೋದ ಪತ್ನಿ ತನ್ನ ಐಡಿ ಹಿಡಿದು ಮತಗಟ್ಟೆಗೆ ತಲುಪಿದ್ದಾಳೆ. ಆ ವ್ಯಕ್ತಿ ತಕ್ಷಣ ತನ್ನ ಓಡಿ ಹೋದ ಪತ್ನಿಯ ಕಡೆಗೆ ಹೋಗುತ್ತಾನೆ. ಅವನು ಅವಳ ವೋಟರ್ ಐಡಿ ಕಿತ್ತುಕೊಳ್ಳೋಕೆ ಪ್ರಯತ್ನಿಸ್ತಾನೆ. ಅವಳ ಕೂದಲನ್ನು ಎಳೆದು ಹಿಂದಿನಿಂದ ಹಿಡಿದುಕೊಳ್ತಾನೆ. ಅಲ್ಲಿ ಪರಿಸ್ಥಿತಿ ಕೈಮೀರುತ್ತದೆ. ಆ ಮಹಿಳೆ ತನ್ನ ಮೊದಲ ಗಂಡನಿಂದ ತಪ್ಪಿಸಿಕೊಳ್ಳೋಕೆ ಪರದಾಡ್ತಾಳೆ. ನಂತರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಸಿಬ್ಬಂದಿ ಧಾವಿಸಿ ಇಬ್ಬರನ್ನು ದೂರ ಮಾಡುತ್ತಾರೆ.

ನಂತರ ಮಹಿಳೆಯನ್ನು ಆಕೆಯ ಮೊದಲ ಗಂಡನಿಂದ ರಕ್ಷಿಸುತ್ತಾರೆ. ಆದರೆ ತನ್ನನ್ನು ಬಿಟ್ಟು ಪ್ರಿಯಕರನ ಜೊತೆ ಓಡಿ ಹೋದ ಹೆಂಡತಿಯನ್ನು ನೋಡಿದ ಗಂಡ ಜೋರಾಗಿ ಕೂಗಾಡ್ತಾ ಬೈಯುತ್ತಲೇ ಇರುತ್ತಾನೆ. ಕೊನೆಗೆ ಆಕೆ ಆತನ ಮೊದಲ ಹೆಂಡತಿ ಎನ್ನುವುದು ಅಲ್ಲಿದ್ದ ಜನರಿಗೂ ಗೊತ್ತಾಗಿದೆ. ಎರಡು ವರ್ಷಗಳ ಹಿಂದೆ ಆಕೆ ಆತನನ್ನು ತೊರೆದು ಬೇರೆ ಯುವಕನ ಜೊತೆ ವಾಸವಾಗಿದ್ದಳು. ಆಕೆ ವೋಟ್ ಮಾಡೋಕೆ ಬರುತ್ತಾಳೆ ಎಂದು ಭಾವಿಸಿದ್ದ ಆ ವ್ಯಕ್ತಿ ಈ ಕ್ಷಣಕ್ಕಾಗಿ ಕಾಯುತ್ತಿದ್ದ.

EPIC ಕಾರ್ಡ್‌ನಿಂದ ಆಕೆಯ ಪತಿ ಎಂದು ತನ್ನ ಹೆಸರನ್ನು ತೆಗೆದುಹಾಕುವವರೆಗೆ ಅಧಿಕಾರಿಗಳು ಆಕೆಗೆ ಮತ ಹಾಕಲು ಅವಕಾಶ ನೀಡಬಾರದು ಎಂದು ಆತ ಒತ್ತಾಯಿಸಿದ್ದಾನೆ. ಭದ್ರತಾ ಸಿಬ್ಬಂದಿ ಅವರ ವಿನಂತಿಯನ್ನು ನಿರಾಕರಿಸಿದರು. ಆದರೆ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಮಹಿಳೆ ಸುರಕ್ಷಿತವಾಗಿ ಮತ ಚಲಾಯಿಸಿದ್ದಾರೆ. ಅಷ್ಟೇ ಅಲ್ಲದೆ ವ್ಯಕ್ತಿಯನ್ನು ಆ ಪ್ರದೇಶದಿಂದ ದೂರ ಕರೆದೊಯ್ದರು. ಆ ವ್ಯಕ್ತಿ ಕೋಪಗೊಂಡ ಸ್ಥಳದಿಂದ ಹೋದರೂ, ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೈಯುತ್ತಲೇ ಇದ್ದರು. ಇಂಥಹ ಘಟನೆ ಈ ಹಿಂದೆ ಎಂದೂ ನೋಡಿರಲಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.


News18 Kannada 1 hour ago
Home Flash News