Select Location
All Locations
State
Region
City / District
TRS.. ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಕೆಸಿಆರ್ ಪುತ್ರಿ ಕೆ.ಕವಿತಾ

TRS.. ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಕೆಸಿಆರ್ ಪುತ್ರಿ ಕೆ.ಕವಿತಾ

ಹೈದರಾಬಾದ್: ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ, ತೆಲಂಗಾಣ ಜಾಗೃತಿ ಸಂಘಟನೆಯ ಅಧ್ಯಕ್ಷೆ ಕೆ. ಕವಿತಾ ಅವರು ಶನಿವಾರ ಹೊಸ ರಾಜಕೀಯ ಪಕ್ಷ ಘೋಷಿಸಿದ್ದಾರೆ. ನಗರದ ಹೊರವಲಯದಲ್ಲಿ ನಡೆದ ಸಮಾರಂಭದಲ್ಲಿ ಕವಿತಾ ಅವರು ಹೊಸ ಪಕ್ಷಕ್ಕೆ ‘ತೆಲಂಗಾಣ ರಾಷ್ಟ್ರ ಸೇನಾ’ (ಟಿಆರ್‌ಎಸ್‌) ಎಂದು ಹೆಸರಿಟ್ಟಿರುವುದಾಗಿ ಪ್ರಕಟಿಸಿದ್ದಾರೆ. ಕಾಳೇಶ್ವರಂ ಎತ್ತಿನಹೊಳೆ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ತಮ್ಮ ಸೋದರಸಂಬಂಧಿ ಟಿ. ಹರೀಶ್ ರಾವ್ ಮತ್ತು ಜೆ. ಸಂತೋಷ್ ಕುಮಾರ್ ವಿರುದ್ಧ ಕವಿತಾ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2025ರಲ್ಲಿ ಅವರನ್ನು ಬಿಆರ್‌ಎಸ್ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ಪಕ್ಷದಿಂದ ಅಮಾನತಾದ ಬಳಿಕ ಕವಿತಾ ಅವರು ತೆಲಂಗಾಣ ಜಾಗೃತಿ ಸಂಘಟನೆ ಮೂಲಕ ಸಾರ್ವಜನಿಕ ಸಮಸ್ಯೆಗಳತ್ತ ಗಮನ ಹರಿಸುತ್ತಿದ್ದರು. ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಮೂಲ ಹೆಸರು ‘ತೆಲಂಗಾಣ ರಾಷ್ಟ್ರ ಸಮಿತಿ’ ಎಂದೇ ಇತ್ತು. ಆದರೆ, 2022ರಲ್ಲಿ ಇದನ್ನು ಬಿಆರ್‌ಎಸ್ ಎಂದು ಮರುನಾಮಕರಣ ಮಾಡಲಾಗಿತ್ತು. ಈಗ ಕವಿತಾ ಅವರು ಅದೇ ಹಳೆಯ ಹೆಸರಿನಲ್ಲಿ (ಟಿಆರ್‌ಎಸ್) ಹೊಸ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದಾರೆ.ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಮೂಲ ಹೆಸರು ‘ತೆಲಂಗಾಣ ರಾಷ್ಟ್ರ ಸಮಿತಿ’ ಎಂದೇ ಇತ್ತು. ಆದರೆ, 2022ರಲ್ಲಿ ಇದನ್ನು ಬಿಆರ್‌ಎಸ್ ಎಂದು ಮರುನಾಮಕರಣ ಮಾಡಲಾಗಿತ್ತು. ಈಗ ಕವಿತಾ ಅವರು ಅದೇ ಹಳೆಯ ಹೆಸರಿನಲ್ಲಿ (ಟಿಆರ್‌ಎಸ್) ಹೊಸ ಪಕ್ಷವನ್ನು ಅಸ್ತಿತ್ವಕ್ಕೆ ತಂದಿದ್ದಾರೆ.


Prajavani 1 hour ago
Home Flash News