Select Location
All Locations
State
Region
City / District
ರಾಜ್ಯದಲ್ಲಿ ಕನ್ನಡ ಬಿಟ್ರೆ ಹೆಚ್ಚು ಮಾತನಾಡೋ ಭಾಷೆ ಯಾವುದು ಗೊತ್ತಾ? ಕುತೂಹಲದ ಅಂಕಿ ಅಂಶ ಬಯಲು

ರಾಜ್ಯದಲ್ಲಿ ಕನ್ನಡ ಬಿಟ್ರೆ ಹೆಚ್ಚು ಮಾತನಾಡೋ ಭಾಷೆ ಯಾವುದು ಗೊತ್ತಾ? ಕುತೂಹಲದ ಅಂಕಿ ಅಂಶ ಬಯಲು

ಕರ್ನಾಟಕದ ಭಾಷೆ ಕನ್ನಡವಾದರೂ, ಬೆಂಗಳೂರಿನಲ್ಲಿ ಬಂದರೆ ಕನ್ನಡಿಗರೂ ಕನ್ನಡ ಮರೆತು ಇಂಗ್ಲಿಷ್​ನಲ್ಲಿ ಮಾತನಾಡುವುದು ಮಾಮೂಲಾಗಿಬಿಟ್ಟಿದೆ! 2008 ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿದ್ದರೂ ಕರುನಾಡಲ್ಲಿ ಕನ್ನಡವನ್ನು ಅಸಡ್ಡೆ ಮಾಡುವ ಒಂದಷ್ಟು ವರ್ಗವೇ ಇದೆ. ನನಗೆ ಕನ್ನಡ ಗೊತ್ತಿಲ್ ಎಂದು ಸ್ಟೈಲ್​ ಆಗಿ ಹೇಳುವುದರಲ್ಲಿ ಬಹುತೇಕ ಬೆಂಗಳೂರಿಗರದ್ದು ಎತ್ತಿದ ಕೈ. ಅದರಲ್ಲಿಯೂ ಕೆಲವೊಂದು ಪ್ರತಿಷ್ಠಿತ ಸ್ಥಳಗಳಿಗೆ ಹೋದರೆ ನಾವು ಕರ್ನಾಟಕದಲ್ಲಿ ಇದ್ದೇವೋ ಅಥವಾ ಅಮೆರಿಕದಲ್ಲಿಯೋ ಎಂದು ಕನ್​ಫ್ಯೂಸ್​ ಆದರೆ, ಕೆಲವು ಪ್ರದೇಶಗಳಲ್ಲಿ ಕರುನಾಡಿನಲ್ಲಿಯೇ ಹುಟ್ಟಿ ಬೆಳೆದವರಿಗೆ ಕನ್ನಡವೇ ಬರುವುದಿಲ್ಲ. ಅಲ್ಲಿ ತಮ್ಮದೇ ರಾಜ್ಯಗಳ ಭಾಷೆಗಳದ್ದೇ ಪಾರುಪತ್ಯ. ಅನೇಕ ಕಚೇರಿಗಳಲ್ಲಿಯೂ ಇದೇ ಪಾಡು.

ಹಾಗೆಂದು ಬೆಂಗಳೂರು ಮಾತ್ರ ಕರ್ನಾಟಕ ಅಲ್ಲವಲ್ಲ. ನಮ್ಮ ಕರ್ನಾಟಕದಲ್ಲಿ ಕನ್ನಡವನ್ನು ಇನ್ನೂ ಉಳಿಸಿಕೊಂಡು ಹೋಗುತ್ತಿರುವ ಹಲವು ಜಿಲ್ಲೆಗಳಿವೆ. ಕನ್ನಡ ಭಾಷೆಯನ್ನು ಕರ್ನಾಟಕದ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಂತಹ ನಗರ ಪ್ರದೇಶಗಳಲ್ಲಿ ಮಾತ್ರ ಮಾತನಾಡಲಾಗುವುದಿಲ್ಲ, ಆದರೆ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಮಾತನಾಡಲಾಗುತ್ತದೆ. ಕನ್ನಡವು ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ ಮತ್ತು 2,000 ವರ್ಷಗಳಿಗೂ ಹೆಚ್ಚು ಹಿಂದಿನದು. 

ಕನ್ನಡದ ಭಾಷೆಯಲ್ಲಿ ಮಾತನಾಡುವುದು ವ್ಯತ್ಯಾಸವಾಗಿದ್ದರೂ, ಕನ್ನಡ ಭಾಷೆ ಒಂದೊಂದು ಸ್ಥಳಗಳಲ್ಲಿ ಒಂದೊಂದು ರೀತಿಯಾಗಿದ್ದರೂ ಅವೆಲ್ಲವೂ ಕನ್ನಡ ಎನ್ನುವುದೇ ಸಮಾಧಾನವಾಗಿದೆ. ಅದಕ್ಕಾಗಿಯೇ ಕರ್ನಾಟಕದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಜನಗಣತಿ ವರದಿಯ ಪ್ರಕಾರ, ಕರ್ನಾಟಕದಲ್ಲಿ ವಾಸಿಸುವ 65% ಕ್ಕೂ ಹೆಚ್ಚು ಜನರು ಕನ್ನಡವನ್ನು ತಮ್ಮ ಪ್ರಾಥಮಿಕ ಭಾಷೆಯಾಗಿ ಅಳವಡಿಸಿಕೊಂಡಿದ್ದಾರೆ. ಇಂದು, ಕನ್ನಡ ಭಾಷೆಯನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲಿಯೂ ಮಾತನಾಡುತ್ತಾರೆ, ಸುಮಾರು 45-50 ಮಿಲಿಯನ್ ಜನರು ಮಾತನಾಡುತ್ತಾರೆ.


Asianet News 1 hour ago
Home Flash News