Select Location
All Locations
State
Region
City / District
ವೈಭವ್ ಆರ್ಭಟಕ್ಕೆ ರಸೆಲ್ ರೆಕಾರ್ಡ್ ಉಡೀಸ್

ವೈಭವ್ ಆರ್ಭಟಕ್ಕೆ ರಸೆಲ್ ರೆಕಾರ್ಡ್ ಉಡೀಸ್

Vaibhav Sooryavanshi Records: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವೈಭವ್ ಸೂರ್ಯವಂಶಿಯ ಆರ್ಭಟ ಮುಂದುವರೆದಿದೆ. ಈ ಆರ್ಭಟದೊಂದಿಗೆ ಇದೀಗ ಭರ್ಜರಿ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ, ಅದು ಕೂಡ ಕೇವಲ 167 ಎಸೆತಗಳಲ್ಲಿ ಎಂಬುದು ವಿಶೇಷ. ಈ ಮೂಲಕ ವೆಸ್ಟ್ ಇಂಡೀಸ್​ನ ಸ್ಫೋಟಕ ದಾಂಡಿಗನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 6 ವರ್ಷಗಳ ಹಿಂದೆ ಆ್ಯಂಡ್ರೆ ರಸೆಲ್ (Andre Russell) ಬರೆದಿಟ್ಟಿದ್ದ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ. ಮುಲ್ಲನ್​ಪುರ್​ನಲ್ಲಿ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್​​ನೊಂದಿಗೆ ಕೇವಲ 16 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್​​ನೊಂದಿಗೆ 43 ರನ್​ ಚಚ್ಚಿದ್ದರು.

ಈ 43 ರನ್​ಗಳೊಂದಿಗೆ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್​ನಲ್ಲಿ 400 ರನ್​ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಸೀಸನ್​ವೊಂದರಲ್ಲಿ ಅತೀ ವೇಗವಾಗಿ 400 ರನ್​ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರಸೆಲ್ ಹೆಸರಿನಲ್ಲಿತ್ತು. 2019 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಡ್ ಪರ ಕಣಕ್ಕಿಳಿದಿದ್ದ ಆ್ಯಂಡ್ರೆ ರಸೆಲ್ ಕೇವಲ 188 ಎಸೆತಗಳಲ್ಲಿ 400 ರನ್​ ಕಲೆಹಾಕಿದ್ದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲೇ ಸೀಸನ್​ವೊಂದರಲ್ಲಿ ಅತೀ ಕಡಿಮೆ ಎಸೆತದಲ್ಲಿ 400 ರನ್​ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದರು.


TV9 Kannada 1 hour ago
Home Flash News