Select Location
All Locations
State
Region
City / District
Pallakki Bus: ಈ ಬಸ್‌ಗೆ ಬೆಂಕಿ ಹತ್ತೋಲ್ಲ! ನೀವು ಮಂತ್ರಾಲಯ, ಉತ್ತರ ಕನ್ನಡ ಪ್ರವಾಸ ಮಾಡಲು ಇದೇ ಬೆಸ್ಟ್‌ ಆಯ್ಕೆ, ಇದು KSRTC 2.0!

Pallakki Bus: ಈ ಬಸ್‌ಗೆ ಬೆಂಕಿ ಹತ್ತೋಲ್ಲ! ನೀವು ಮಂತ್ರಾಲಯ, ಉತ್ತರ ಕನ್ನಡ ಪ್ರವಾಸ ಮಾಡಲು ಇದೇ ಬೆಸ್ಟ್‌ ಆಯ್ಕೆ, ಇದು KSRTC 2.0!

ಮೈಸೂರಿನ ಜನರೇ ಗಮನಿಸಿ, ಇನ್ಮುಂದೆ ನಿಮ್ಮ ಲಾಂಗ್ ಜರ್ನಿ (Long Journey) ಅಕ್ಷರಶಃ ಪಲ್ಲಕ್ಕಿ ಮೇಲೆ ಕುಳಿತಷ್ಟೇ ಆರಾಮದಾಯಕವಾಗಿರಲಿದೆ! ದೂರದ ಊರುಗಳಿಗೆ ಪ್ರಯಾಣಿಸುವವರಿಗಾಗಿ ಕೆಎಸ್‌ಆರ್‌ಟಿಸಿ (KSRTC) ಮೈಸೂರು ಗ್ರಾಮಾಂತರ ವಿಭಾಗ ಈಗ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಹತ್ತು 'ಪಲ್ಲಕ್ಕಿ' ಬ್ರಾಂಡ್‌ನ ನಾನ್ ಎಸಿ ಸ್ಲೀಪರ್ ಬಸ್‌ಗಳು (Non A/C Sleeper Bus) ಈಗ ಮೈಸೂರಿನ (Mysuru) ಅಂಗಳಕ್ಕೆ ಬಂದಿಳಿದಿವೆ.

"ಸಂತೋಷವು ಪ್ರಯಾಣಿಸುತ್ತದೆ" ಅನ್ನೋ ಟ್ಯಾಗ್ ಲೈನ್‌ಗೆ ತಕ್ಕಂತೆ, ಈ ಬಸ್‌ಗಳಲ್ಲಿ ರಾಜವೈಭೋಗದ ಸೌಲಭ್ಯಗಳಿವೆ. ಮೆತ್ತಗಿನ ಹಾಸಿಗೆ, ಪ್ರತಿಯೊಬ್ಬರಿಗೂ ಪ್ರತ್ಯೇಕ ಪರದೆ ಹಾಗೂ ಸುರಕ್ಷತೆಗಾಗಿ ಮೂರು ಸಿಸಿ ಕ್ಯಾಮೆರಾಗಳನ್ನು ಈ ಬಸ್ಸಿನಲ್ಲಿ ಅಳವಡಿಸಲಾಗಿದೆ. ಚಾಲಕರಿಗೂ ಇಲ್ಲಿ ಆರಾಮದಾಯಕ ಸೀಟುಗಳ ವ್ಯವಸ್ಥೆಯಿದ್ದು, ಪ್ರಯಾಣಿಕರಿಗೆ ಇದೊಂದು ಹೊಸ ಅನುಭವ ನೀಡಲಿದೆ.

ಅಷ್ಟಕ್ಕೂ ಈ ಬಸ್ಸಿನ ಸ್ಪೆಷಾಲಿಟಿ ಅಂದ್ರೆ ಅದು 'ಫೈರ್ ಡಿಟೆಕ್ಷನ್' ತಂತ್ರಜ್ಞಾನ! ಇತ್ತೀಚೆಗೆ ಬಸ್‌ಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಬಸ್ಸಿನ ಇಂಜಿನ್‌ನಲ್ಲಿ ಸಣ್ಣ ಬೆಂಕಿ ಅಥವಾ ಹೊಗೆ ಕಂಡುಬಂದರೂ ಚಾಲಕನಿಗೆ ತಕ್ಷಣ ಎಚ್ಚರಿಕೆ ರವಾನೆಯಾಗುತ್ತದೆ. ಚಾಲಕ ಕೇವಲ ಒಂದು ಬಟನ್ ಒತ್ತಿದರೆ ಸಾಕು, ಬೆಂಕಿ ಬಿದ್ದ ಜಾಗಕ್ಕೆ ತಾನಾಗಿಯೇ ನೀರು ಸಿಂಪಡಣೆಯಾಗಿ ಆಪತ್ತು ತಪ್ಪುತ್ತದೆ.


News18 Kannada 1 hour ago
Home Flash News