Select Location
All Locations
State
Region
City / District
ಹೊರ್ಮುಜ್ ತೆರೆದು, ಮಾತುಕತೆಗೆ 30 ದಿನಗಳ ಯುದ್ಧ ವಿರಾಮ: ಅಮರಿಕ–ಇರಾನ್ ಚರ್ಚೆ

ಹೊರ್ಮುಜ್ ತೆರೆದು, ಮಾತುಕತೆಗೆ 30 ದಿನಗಳ ಯುದ್ಧ ವಿರಾಮ: ಅಮರಿಕ–ಇರಾನ್ ಚರ್ಚೆ

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಅತ್ತ ಸಂಘರ್ಷ, ಇತ್ತ ಶಾಂತಿ ಮಾತುಕತೆಯ ಪ್ರಹಸನ ಮುಂದುವರಿದಿದೆ. ಸದ್ಯಕ್ಕೆ ಎರಡೂ ಕಡೆಯಿಂದ ಸಂಘರ್ಷ ನಿಲ್ಲಿಸಿ, ವಾಣಿಜ್ಯ ಸಂಚಾರಕ್ಕಾಗಿ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಗುರಿಯನ್ನು ಹೊಂದಿರುವ ತಾತ್ಕಾಲಿಕ ಒಂದು ಪುಟದ ಚೌಕಟ್ಟಿನ ಬಗ್ಗೆ ಚರ್ಚಿಸುತ್ತಿವೆ. ಈ ಬಗ್ಗೆ ತಿಳಿದಿರುವ ಇರಾನ್‌ನ ಮೂವರು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಈ ಪ್ರಸ್ತಾಪವು 30 ದಿನಗಳ ಯುದ್ಧ ವಿರಾಮಕ್ಕೆ ಅನುವು ಮಾಡಿಕೊಡುತ್ತದೆ. ಈ ಸಮಯದಲ್ಲಿ ಉಭಯ ರಾಷ್ಟ್ರಗಳು ಸಮಗ್ರ ಚರ್ಚೆ ನಡೆಸಿ, ಶಾಶ್ವತ ಒಪ್ಪಂದದ ಕಡೆಗೆ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ವರದಿ ಹೇಳಿದೆ. ಎರಡೂ ಕಡೆಯವರ ನಡುವಿನ ಚರ್ಚೆ ಮುಂದುವರೆದಿದ್ದು, ಸಂಭಾವ್ಯ ಯುದ್ಧವಿರಾಮ ಚೌಕಟ್ಟಿನ ಕುರಿತು ಸಮಾಲೋಚಕರು ಪ್ರಸ್ತಾಪಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್‌ನ ಪರಮಾಣು ಯೋಜನೆಯ ಭವಿಷ್ಯ ಮತ್ತು ಅದರ ಸಮೃದ್ಧೀಕರಿಸಿದ ಯುರೇನಿಯಂನ ದಾಸ್ತಾನು ಕುರಿತು ಪೂರ್ವ ಬದ್ಧತೆಗಾಗಿ ಅಮೆರಿಕ ಬೇಡಿಕೆಯು ಮಾತುಕತೆಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಇರಾನ್‌ನ ಅಧಿಕಾರಿಗಳು ಹೇಳಿದ್ದಾರೆ.

ಇರಾನ್ ತನ್ನ ಸಮೃದ್ಧೀರಿಸಿದ ಯುರೇನಿಯಂ ದಾಸ್ತಾನನ್ನು ಅಮೆರಿಕಕ್ಕೆ ರವಾಯಿಸುವ, ಮೂರು ಪರಮಾಣು ಕೇಂದ್ರಗಳನ್ನು ಸ್ಥಗಿತಗೊಳಿಸುವ ಮತ್ತು ಯುರೇನಿಯಂ ಸಮೃದ್ಧೀಕರಣ ಚಟುವಟಿಕೆಗಳನ್ನು 20 ವರ್ಷಗಳ ಕಾಲ ಸ್ಥಗಿತಗೊಳಿಸುವ ಷರತ್ತನ್ನು ಅಮೆರಿಕದ ಸಮಾಲೋಚಕರು ಮುಂದಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಇರಾನ್ ತನ್ನ ಯುರೇನಿಯಂ ದಾಸ್ತಾನಿನ ಸ್ವಲ್ಪ ಪ್ರಮಾಣವನ್ನು ನಿಷ್ಕ್ರಿಯಗೊಳಿಸುವ ಮತ್ತು ಉಳಿದದ್ದನ್ನು ಮೂರನೇ ದೇಶಕ್ಕೆ, ಬಹುಶಃ ರಷ್ಯಾಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ ಎಂದು ವರದಿ ತಿಳಿಸಿದೆ. ಇರಾನ್‌ನ ಪ್ರಸ್ತಾವನೆ ಪ್ರಕಾರ, ಯುರೇನಿಯಂ ಸಮೃದ್ಧೀಕರಣವನ್ನು 10 ರಿಂದ 15 ವರ್ಷಗಳವರೆಗೆ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ. ಆದರೂ ಮೂರು ಪರಮಾಣು ಸೌಲಭ್ಯಗಳ ಭವಿಷ್ಯದ ಬಗ್ಗೆ ಯಾವುದೇ ಒಪ್ಪಂದಕ್ಕೆ ಬಂರಲಾಗಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.


Prajavani 22 days ago
Home Flash News