Select Location
All Locations
State
Region
City / District
Vi ನಿಂದ ಹೊಸ ಹೈಬ್ರಿಡ್ ಪ್ರಿಪೇಯ್ಡ್ ಪ್ಲಾನ್ ರಿಲೀಸ್‌: ಏರ್‌ಟೆಲ್‌ ಗ್ರಾಹಕರೇ ನೇರ ಟಾರ್ಗೆಟ್‌!

Vi ನಿಂದ ಹೊಸ ಹೈಬ್ರಿಡ್ ಪ್ರಿಪೇಯ್ಡ್ ಪ್ಲಾನ್ ರಿಲೀಸ್‌: ಏರ್‌ಟೆಲ್‌ ಗ್ರಾಹಕರೇ ನೇರ ಟಾರ್ಗೆಟ್‌!

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ವೋಡಾಫೋನ್ ಐಡಿಯಾ (Vi), ಆಗಾಗ್ಗೆ ವಿದೇಶ ಪ್ರಯಾಣ ಮಾಡುವ ಗ್ರಾಹಕರಿಗಾಗಿ ವಿಶೇಷವಾದ 'ಹೈಬ್ರಿಡ್' ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್‌ನ ವಿಶೇಷತೆಯೆಂದರೆ ಇದು ಭಾರತದಲ್ಲಿ ಮಾತ್ರವಲ್ಲದೆ ವಿದೇಶ ಪ್ರವಾಸದ ವೇಳೆಯೂ ಕರೆ ಮತ್ತು ಡೇಟಾ ಸೌಲಭ್ಯವನ್ನು ಒದಗಿಸುತ್ತದೆ.

ಈ ಹೊಸ ಹೈಬ್ರಿಡ್ ಪ್ಲಾನ್‌ನ ಬೆಲೆ 4,997 ರೂಪಾಯಿಗಳಾಗಿದ್ದು, ಇದು ಪೂರ್ಣ 365 ದಿನಗಳ ಅಂದರೆ ಒಂದು ವರ್ಷದ ಅವಧಿಯ ವ್ಯಾಲಿಡಿಟಿಯನ್ನು ಹೊಂದಿದೆ. ಪದೇ ಪದೇ ರೀಚಾರ್ಜ್ ಮಾಡುವ ಕಿರಿಕಿರಿ ತಪ್ಪಿಸಲು ಬಯಸುವ ಮತ್ತು ಅಂತರಾಷ್ಟ್ರೀಯ ಪ್ರಯಾಣ ಮಾಡುವವರಿಗೆ ಇದು 'ಆಲ್ ಇನ್ ಒನ್' ಪರಿಹಾರವಾಗಿದೆ.


Asianet News 1 hour ago
Home Flash News