Select Location
All Locations
State
Region
City / District
HDK v/s DKS: 'ಸಿದ್ದರಾಮಯ್ಯರನ್ನ ಹೆದರಿಸ್ತಿದ್ದಾರೆ, ಡಿಕೆಶಿ ಧಮ್ಕಿ ನಮ್ ಹತ್ರ ನಡೆಯಲ್ಲ', ಗುಡುಗಿದ ಕುಮಾರಸ್ವಾಮಿ

HDK v/s DKS: 'ಸಿದ್ದರಾಮಯ್ಯರನ್ನ ಹೆದರಿಸ್ತಿದ್ದಾರೆ, ಡಿಕೆಶಿ ಧಮ್ಕಿ ನಮ್ ಹತ್ರ ನಡೆಯಲ್ಲ', ಗುಡುಗಿದ ಕುಮಾರಸ್ವಾಮಿ

ಬೆಂಗಳೂರು (ಮೇ.14): ಮತ್ತೆ ರಾಜ್ಯ ರಾಜಕೀಯದ ಬದ್ದ ಎದುರಾಳಿಗಳ ಗದ್ದಲ ಜೋರಾದಂತೆ ಕಾಣ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಗುಡುಗಿದ್ದಾರೆ. ಜೆಡಿಎಸ್‌‌ ಕಚೇರಿಯಲ್ಲಿ (JDS Office) ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕುಮಾರಸ್ವಾಮಿ (Kumaraswamy) ಅವ್ರು, ಹುಟ್ಟುಹಬ್ಬದ ಉಡುಗೊರೆ ಎನ್ನುವಂತೆ ಡಿಕೆ ಶಿವಕುಮಾರ್ ಅವ್ರು, ಬೆಂಗಳೂರು ನಗರದ ಅಭಿವೃದ್ಧಿಗೆ ದೊಡ್ಡ ಮಟ್ಟದ ಗ್ಯಾರಂಟಿ ಬೇರೆ‌ ಘೋಷಣೆ ಮಾಡಿದ್ದಾರೆ. ಆದ್ರೆ ಅದರ ಹಿಂದಿನ ಸತ್ಯ ಅನೇಕರಿಗೆ ತಿಳಿದಿಲ್ಲ ಎಂದು ಹೆಚ್​​ಡಿಕೆ ಗುಡುಗಿದ್ದಾರೆ.

ಜನ ಸಂತೋಷದಿಂದ ತೇಲಾಡುವ 6ನೇ ಗ್ಯಾರಂಟಿ ಕೊಟ್ಟಿದ್ದಾಗಿ ಡಿಕೆ ಶಿವಕುಮಾರ್​ ಹೇಳಿದ್ರು, ಆದ್ರೆ ಗ್ರೇಟರ್ ಬೆಂಗಳೂರು ಹೆಸರಲ್ಲಿ ಇಂಟ್ರಿಗೇಟ್ ಟೌನ್ ಶಿಪ್ ಮಾಡುವ ಘೋಷಣೆ ಮಾಡಿದ್ದಾರೆ. ಅದು ಬಿಡದಿಯ 8 ಹಳ್ಳಿಯನ್ನ ಸೇರಿಸುವ ಟೌನ್ ಶಿಪ್ ಯೋಜನೆ ಅಲ್ಲಿನ ರೈತರಿಗೆ ಇದು ಕುಮಾರಸ್ವಾಮಿ ಕೂಸು ಇದು‌ ಎಂದು ಹೇಳ್ತಿದ್ದಾರೆ.

ಈ‌‌ ಸರ್ಕಾರ ರೈತರ ಭೂಮಿ ತಗೊಂಡು, ರಿಯಲ್‌ ಎಸ್ಟೇಟ್‌ ಮಾಫಿಯಾ ಮಾಡಲು ಹೊರಟಿದೆ. ಇದರ‌ ನಾಯಕತ್ವವನ್ನ ಬ್ರೋಕರ್ ಆಗಿ ಸಿದ್ದರಾಮಯ್ಯನವರಿಗೆ ವಹಿಸಿದಂತಿದೆ. ನಾನು 2006ರಲ್ಲಿ ಐದು ಟೌನ್‌ ಶಿಪ್ ಮಾಡಲು ತೀರ್ಮಾನ ಮಾಡಿದ್ದೆ. ಹೊಸಕೋಟೆ ,ಸಾತನೂರು ಸೇರಿ ಐದು ಟೌನ್ ಶಿಪ್ ಮಾಡಲು ಮುಂದಾಗಿದ್ದೆ. ರೈತರಿಗಾಗಿ ಅಷ್ಟೇ ಅಲ್ಲಾ ಬೆಂಗಳೂರು ನಗರದ‌ ಅಭಿವೃದ್ಧಿಗೆ ಹಲವು ಯೋಜನೆ ತಂದಿದ್ದೆ ಎಂದ್ರು ಕುಮಾರಸ್ವಾಮಿ.


News18 Kannada 1 hour ago
Home Flash News