Select Location
All Locations
State
Region
City / District
British Scholarships 2026: ಬ್ರಿಟನ್‌ನಲ್ಲಿ ಉಚಿತವಾಗಿ ಓದಬೇಕೇ? ಭಾರತೀಯ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ‘ಬ್ರಿಟಿಷ್ ಸ್ಕಾಲರ್‌ಶಿಪ್’ ಕಂಪ್ಲೀಟ್ ಗೈಡ್!

British Scholarships 2026: ಬ್ರಿಟನ್‌ನಲ್ಲಿ ಉಚಿತವಾಗಿ ಓದಬೇಕೇ? ಭಾರತೀಯ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ‘ಬ್ರಿಟಿಷ್ ಸ್ಕಾಲರ್‌ಶಿಪ್’ ಕಂಪ್ಲೀಟ್ ಗೈಡ್!

ಲಂಡನ್ ಸೇರಿದಂತೆ ಯುಕೆಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲು ಇಚ್ಛಿಸುವವರಿಗಾಗಿ ಬ್ರಿಟಿಷ್ ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ಪ್ರತಿ ವರ್ಷ ವಿದ್ಯಾರ್ಥಿವೇತನವನ್ನು ನೀಡುತ್ತವೆ. ಈ ಸ್ಕಾಲರ್‌ಶಿಪ್‌ಗಳು ನಿಮ್ಮ ಬೋಧನಾ ಶುಲ್ಕ ಮಾತ್ರವಲ್ಲದೆ, ವಾಸದ ವೆಚ್ಚವನ್ನೂ ಭರಿಸಬಲ್ಲವು. ಆದ್ದರಿಂದ ಭಾರತೀಯ ವಿದ್ಯಾರ್ಥಿಗಳಿಗಾಗಿ ‘ಬ್ರಿಟಿಷ್ ಸ್ಕಾಲರ್‌ಶಿಪ್ 2026’ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಮುಖ ಸ್ಕಾಲರ್‌ಶಿಪ್‌ಗಳು ಯಾವುವು? ಚೆವೆನಿಂಗ್ ಸ್ಕಾಲರ್‌ಶಿಪ್ (Chevening Scholarship): ಇದು ಬ್ರಿಟಿಷ್ ಸರ್ಕಾರದ ಅತ್ಯಂತ ಪ್ರತಿಷ್ಠಿತ ವಿದ್ಯಾರ್ಥಿವೇತನವಾಗಿದೆ. ನಾಯಕತ್ವದ ಗುಣ ಹೊಂದಿರುವ ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಪದವಿ (Master’s) ಮಾಡಲು ಇದು ಸಂಪೂರ್ಣ ಆರ್ಥಿಕ ನೆರವು ನೀಡುತ್ತದೆ. ಕಾಮನ್‌ವೆಲ್ತ್ ಸ್ಕಾಲರ್‌ಶಿಪ್ (Commonwealth Scholarship): ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಇದನ್ನು ನೀಡಲಾಗುತ್ತದೆ. ಇದು ಬೋಧನಾ ಶುಲ್ಕ, ವಿಮಾನ ಪ್ರಯಾಣ ವೆಚ್ಚ ಮತ್ತು ಜೀವನ ನಿರ್ವಹಣಾ ಭತ್ಯೆಯನ್ನು ಒಳಗೊಂಡಿರುತ್ತದೆ.

ಗ್ರೇಟ್ ಸ್ಕಾಲರ್‌ಶಿಪ್ (GREAT Scholarships): ಯುಕೆಯ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಓದಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿದ್ಯಾರ್ಥಿವೇತನವಿದು. ಇದು ಕನಿಷ್ಠ 10,000 ಪೌಂಡ್‌ಗಳಷ್ಟು ಆರ್ಥಿಕ ನೆರವು ನೀಡುತ್ತದೆ. ಚಾರ್ಲ್ಸ್ ವ್ಯಾಲೇಸ್ ಇಂಡಿಯಾ ಟ್ರಸ್ಟ್ (Charles Wallace India Trust): ಕಲೆ, ಪರಂಪರೆ ಸಂರಕ್ಷಣೆ ಅಥವಾ ಮಾನವಿಕ ವಿಷಯಗಳಲ್ಲಿ ಸಂಶೋಧನೆ ಅಥವಾ ಕೋರ್ಸ್ ಮಾಡಲು ಬಯಸುವವರಿಗೆ ಈ ಟ್ರಸ್ಟ್ ಸಹಾಯ ಮಾಡುತ್ತದೆ.


TV9 Kannada 55 minutes ago
Home Flash News