ದರ್ಶನ್ಗೆ ಇನ್ನೂ ಒಂದು ವರ್ಷ ಜೈಲು ಫಿಕ್ಸ್; ಸುಪ್ರೀಂ ಕೋರ್ಟ್ನಲ್ಲೂ ದಾಸನಿಗೆ ಹಿನ್ನಡೆ, ಇವತ್ತು ಆಗಿದ್ದೇನು?
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪಗೆ ಸುಪ್ರೀಂಕೋರ್ಟ್‌ನಲ್ಲಿ ಇಂದು ದೊಡ್ಡ ಆಘಾತ ಆಗಿದೆ. ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಸದ್ಯಕ್ಕೆ ಪುರಸ್ಕರಿಸಿಲ್ಲ. ಇದರಿಂದಾಗಿ ದರ್ಶನ್ ಕನಿಷ್ಠ ಇನ್ನೂ ಒಂದು ವರ್ಷ ಕಾಲ ಜೈಲಿನಲ್ಲಿಯೇ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ವಿಜಯ್ ಬಿಷ್ಣೋಯಿ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಇಂದು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ದರ್ಶನ್ ಪರವಾಗಿ ದೇಶದ ಖ್ಯಾತ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರೆ, ಪ್ರಾಸಿಕ್ಯೂಷನ್ ಪರವಾಗಿ ಸಿದ್ದಾರ್ಥ್ ಲೂತ್ರಾ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದರು. ದರ್ಶನ್ ಪರ ವಕೀಲ ಮುಕುಲ್ ರೋಹ್ಟಗಿ ವಾದ ದರ್ಶನ್ ಜೈಲು ಸೇರಿ ಈಗಾಗಲೇ 8 ತಿಂಗಳು ಕಳೆದಿದೆ. ಈ ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದಾರೆ. ಆದರೆ ಈವರೆಗೆ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ವಿಚಾರಣೆ ಅತ್ಯಂತ ವಿಳಂಬವಾಗುತ್ತಿದೆ. ದರ್ಶನ್ ಅವರನ್ನು ಇನ್ನೂ ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದೆ. ಜೈಲಿನಲ್ಲಿ ಅವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ಒದಗಿಸುತ್ತಿಲ್ಲ. ಕುಟುಂಬದವರನ್ನು ಭೇಟಿ ಮಾಡಲು ಅವಕಾಶವಿದ್ದರೂ, ಪೊಲೀಸರು ಪಕ್ಕದಲ್ಲೇ ನಿಂತು ಮಾತುಕತೆಯನ್ನು ಆಲಿಸುತ್ತಿದ್ದಾರೆ ಎಂದು ರೋಹ್ಟಗಿ ದೂರಿದರು.
ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಇನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುತ್ತೇವೆ. ಸಾಕ್ಷಿಗಳ ವಿಚಾರಣೆಯಲ್ಲಿ ದರ್ಶನ್ ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿವೆ. ಜೈಲಿನಲ್ಲಿ ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ. ಈಗಾಗಲೇ ಅವರು 70 ಬಾರಿ ಕುಟುಂಬದವರನ್ನು ಭೇಟಿ ಮಾಡಿದ್ದಾರೆ" ಎಂದು ಅಫಿಡವಿಟ್ ಮೂಲಕ ಮಾಹಿತಿ ನೀಡಿದರು. ಕೋರ್ಟ್ ಖಡಕ್ ಎಚ್ಚರಿಕೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ದರ್ಶನ್ ಪರ ವಕೀಲರಿಗೆ ಎಚ್ಚರಿಕೆ ನೀಡಿತು. ನೀವು ಸಾಕ್ಷಿಗಳ ವಿಚಾರದಲ್ಲಿ ಏನು ಮಾಡಿದ್ದೀರಾ ಎಂದು ನಾವು ಹೇಳಲು ಹೋದರೆ, ನಿಮ್ಮ ಜಾಮೀನು ಅರ್ಜಿಯೇ ವಜಾಗೊಳ್ಳಬಹುದು ಎಂದು ನ್ಯಾಯಪೀಠ ಗಂಭೀರವಾಗಿ ಹೇಳಿತು. ಒಂದು ವರ್ಷದ ಗಡುವು: ಮುಂದಿನ ಒಂದು ವರ್ಷದೊಳಗೆ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಪ್ರಾಸಿಕ್ಯೂಷನ್‌ಗೆ ಕೋರ್ಟ್ ಸೂಚಿಸಿತು.