Select Location
All Locations
State
Region
City / District
ಸತತ 10 ಗಂಟೆ ಕಾರ್ಯಾಚರಣೆಯಲ್ಲಿ 300 ಅಡಿ ಬೋರ್‌ವೆಲ್‌ಗೆ ಬಿದ್ದ ಮಗುವಿನ ರಕ್ಷಣೆ, ವಿಡಿಯೋ

ಸತತ 10 ಗಂಟೆ ಕಾರ್ಯಾಚರಣೆಯಲ್ಲಿ 300 ಅಡಿ ಬೋರ್‌ವೆಲ್‌ಗೆ ಬಿದ್ದ ಮಗುವಿನ ರಕ್ಷಣೆ, ವಿಡಿಯೋ

ಹೋಶಿಯಾರ್‌ಪುರ್ (ಮೇ.16) ಭಾರತದಲ್ಲಿ ಪದೇ ಪದೇ ಬೋರ್‌ವೆಲ್ ದುರಂತಗಳು ನಡೆಯುತ್ತಲೇ ಇದೆ. ಈ ಪೈಕಿ ಕೆಲವೇ ಕೆಲವು ಕಾರ್ಯಾಚರಣೆಗಳು ಯಶಸ್ವಿಯಾಗಿದೆ. ಇದೀಗ ಪಂಜಾಬ್‌ನ ಹೊಶಿಯಾರ್‌ಪುರದಲ್ಲಿ ಮೂರು ವರ್ಷದ ಬಾಲಕ ಅಚಾನಕ್ಕಾಗಿ 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ. ಕುಟುಂಬಸ್ಥರು ಮಗನ ರಕ್ಷಣೆಗಾಗಿ ಕೂಗಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದೆ. ಕ್ಯಾಮೆರಾ, ಆಮ್ಲಜನಕ ಪೈಪ್‌ಗಳನ್ನು ಬೋರ್‌ವೆಲ್ ಒಳಕ್ಕೆ ನೀಡಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸತತ 10 ಗಂಟೆಗಳ ಕಾರ್ಯಾಚರಣೆ ಬಳಿಕ ಮೂರು ವರ್ಷದ ಬಾಲಕನ ರಕ್ಷಣೆ ಮಾಡುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿದೆ.

ಶುಕ್ರವಾರ ಸಂಜೆ 4 ಗಂಟೆಗೆ 3 ವರ್ಷದ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದ. ಭೂಮಿಯಿಂದ 90 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದ. ಪೋಷಕರು ನೆರವಿಗಾಗಿ ಕೂಗಿದ್ದಾರೆ. ಸ್ಥಳೀಯರು ಆಗಮಿಸಿದ್ದಾರೆ. ತಕ್ಷಣವೆ ರಕ್ಷಣಾ ತಂಡಕ್ಕೆ ಮಾಹಿತಿ ನೀಡಲಾಗಿದೆ. ಎನ್‌ಡಿಆರ್‌ಏಫ್, ಎಸ್‌ಡಿಆರ್‌ಎಫ್, ಸ್ಥಳೀಯರು, ಜಿಲ್ಲಾಡಳಿತ, ಎನ್‌ಜಿಒ ಸೇರಿದಂತೆ ದೊಡ್ಡ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಜೆಸಿಬಿ ಮೂಲಕ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇತ್ತ ಪೋಷಕರು ಮಗನ ರಕ್ಷಣೆಗಾಗಿ ಅಂಗಲಾಚುತ್ತಿದ್ದರೆ, ಇತ್ತ ರಕ್ಷಣಾ ಕಾರ್ಯಾಚರಣೆಗೆ ಹಲವು ಅಡ್ಡಿ ಆತಂತಗಳು ಎದುರಾಗಿತ್ತು. ಒಂದೊಂದು ಗಂಟೆಗಳು ಉರುಳುತ್ತಿದ್ದಂತೆ ಪೋಷಕರು ಅಸ್ವಸ್ಥರಾಗಿದ್ದರು. ಆದರೆ ಮಗನ ರಕ್ಷಣೆಗಾಗಿ ಎದುರುನೋಡುತ್ತಾ ದೇವರ ಪ್ರಾರ್ಥಿಸುತ್ತಿದ್ದರು. ಇತ್ತ ರಕ್ಷಣಾ ತಂಡಗಳು ನಿರಂತರ 10 ಗಂಟೆ ಕಾರ್ಯಾಚರಣೆ ಮಾಡಿ 90 ಅಡಿ ಆಳಕ್ಕೆ ತೆರಳಿದೆ. ಬಳಿಕ ರಕ್ಷಣಾ ತಂಡಗಳು ಯಶಸ್ವಿಯಾಗಿದೆ.


Asianet News 1 hour ago
Home Flash News