Select Location
All Locations
State
Region
City / District
ಚೀನಾ ಪ್ರವಾಸ ಮುಗಿಸಿ ಅಮೆರಿಕಕ್ಕೆ ವಾಪಾಸ್‌ ಆದ ಡೊನಾಲ್ಡ್ ಟ್ರಂಪ್‌

ಚೀನಾ ಪ್ರವಾಸ ಮುಗಿಸಿ ಅಮೆರಿಕಕ್ಕೆ ವಾಪಾಸ್‌ ಆದ ಡೊನಾಲ್ಡ್ ಟ್ರಂಪ್‌

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ವಾಷಿಂಗ್ಟನ್‌ಗೆ ವಾಪಾಸ್‌ ಆಗಿದ್ದಾರೆ. ಶುಕ್ರವಾರ ಸಂಜೆ ಮೇರಿಲ್ಯಾಂಡ್‌ನ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ವಿಮಾನದಿಂದ ಇಳಿದ ಅವರು, ತಮ್ಮ ಚೀನಾ ಪ್ರವಾಸವನ್ನು ‘ಎರಡು ಮಹಾನ್ ದೇಶಗಳ ನಾಯಕರ ಭೇಟಿ’ ಎಂದು ಬಣ್ಣಿಸಿದ್ದಾರೆ. ಬೋಯಿಂಗ್ ಸಂಸ್ಥೆಯಿಂದ ಚೀನಾ 200 ವಿಮಾನಗಳನ್ನು ಖರೀದಿಸುವ ಒಪ್ಪಂದ ಸೇರಿದಂತೆ ಪ್ರಮುಖ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಅಮೆರಿಕದ ಕೃಷಿ ವಲಯಕ್ಕೆ ಪ್ರಯೋಜನಕಾರಿಯಾಗುವ ಒಪ್ಪಂದಗಳಿಗೂ ಸಹಿ ಹಾಕಲಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ‘ಎರಡು ಮಹಾನ್ ದೇಶಗಳು. ನಾನು ಇದನ್ನು ಜಿ-2 ಎಂದು ಕರೆಯುತ್ತೇನೆ. ಈ ಭೇಟಿ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಕ್ಷಣವಾಗಿ ದಾಖಲಾಗಲಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಫಾಕ್ಸ್ ನ್ಯೂಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದಾರೆ.

ಚೀನಾದೊಂದಿಗಿನ ಸಂಬಂಧವು ಮುಖ್ಯವಾಗಿದೆ ಎಂದು ಹೇಳಿದ ಟ್ರಂಪ್‌, ತೈವಾನ್ ವಿಷಯದಲ್ಲಿ ಚೀನಾ ಯಾವುದೇ ಆಕ್ರಮಣಕಾರಿ ಕ್ರಮಗಳಿಗೆ ಮುಂದಾಗದಿರಬಹುದು ಎಂದು ಸುಳಿವು ನೀಡಿದ್ದಾರೆ. ಅಲ್ಲದೇ, ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಭೇಟಿ ನೀಡುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ ಆಹ್ವಾನ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಸಭೆಯಲ್ಲಿ ಪಾಲ್ಗೊಳ್ಳಲು ಟ್ರಂಪ್ ಅವರು ಚೀನಾಕ್ಕೆ ಮತ್ತೊಮ್ಮೆ ಪ್ರಯಾಣಿಸುವ ಸಾಧ್ಯತೆಯಿದೆ. ಹಾಗೆಯೇ ಡಿಸೆಂಬರ್‌ನಲ್ಲಿ ಮಿಯಾಮಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಷಿ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳಲು ಸಾಧ್ಯತೆಯಿದೆ ಎಂದು ವರದಿಯಾಗಿದ.


Prajavani 57 minutes ago
Home Flash News