Select Location
All Locations
State
Region
City / District
ಮುಂಚಿತವಾಗಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದೇಕೆ GT ದೇವೇಗೌಡ: ಸಾ.ರಾ.ಮಹೇಶ್ ಕಿಡಿ

ಮುಂಚಿತವಾಗಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದೇಕೆ GT ದೇವೇಗೌಡ: ಸಾ.ರಾ.ಮಹೇಶ್ ಕಿಡಿ

ಮಾಜಿ ಸಚಿವ ಸಾ.ರಾ ಮಹೇಶ್ ಅವರು ಮೈಸೂರಿನಲ್ಲಿ ಜಿ.ಟಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ತಂತ್ರಗಳು ನಮಗೆ ಅರ್ಥವಾಗುತ್ತವೆ ಎಂದಿದ್ದಾರೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳುವ ಮೂಲಕ, ಜಿ.ಟಿ.ಡಿ ಅವರಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ. ಮೈಸೂರು: ಮಾಜಿ ಸಚಿವ ಜಿ.ಟಿ.ದೇವೇಗೌಡರ ತಂತ್ರಗಳೆಲ್ಲಾ ನಮಗೆ ಅರ್ಥವಾಗುತ್ತವೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿಕೆ ನೀಡಿದ್ದಾರೆ. ಪಕ್ಷಕ್ಕಿಂತ ನಮಗೆ ದೊಡ್ಡವರು ಯಾರು ಇಲ್ಲ ಎಂದು ಪರೋಕ್ಷವಾಗಿ ಜಿ.ಟಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್ ಪಕ್ಷದಲ್ಲಿ ರಾಷ್ಟ್ರೀಯ ನಾಯಕರು ಹಚ್‌ಡಿ.ದೇವೇಗೌಡರು, ರಾಜ್ಯ ನಾಯಕರು ಹೆಚ್.ಡಿ.ಕುಮಾರಸ್ವಾಮಿ, ಮೈಸೂರು ನಾಯಕರು ಜಿಟಿ.ದೇವೇಗೌಡ ಇದ್ದರು. ಈಗ ರಾಷ್ಟ್ರೀಯ ನಾಯಕರು ಹೆಚ್.ಡಿ.ದೇವೇಗೌಡ, ರಾಜ್ಯ ನಾಯಕರು ಹೆಚ್‌ಡಿ.ಕುಮಾರಸ್ವಾಮಿ ಅಷ್ಟೇ ಎಂದು ಸಾ.ರಾ.ಮಹೇಶ್ ಟಾಂಗ್ ಕೊಟ್ಟರು. ಜಿ.ಟಿ ದೇವೇಗೌಡರಿಂದ ನಮ್ಮ ಪಕ್ಷಕ್ಕೆ ಬಹಳ ದೊಡ್ಡ ನಷ್ಟವಾಗಿದೆ ಎಂದ ಸಾ.ರಾ.ಮಹೇಶ್, ಅವರು ಒಂದೊಂದು ಚುನಾವಣೆಗೆ ಒಂದೊಂದು ತೀರ್ಮಾನ ಮಾಡುತ್ತಾರೆ. ಜಿ.ಟಿ.ದೇವೇಗೌಡ ಅವರ ತೀರ್ಮಾನಗಳಿಂದ ಕಾರ್ಯಕರ್ತರಿಗೆ ಅಘಾತವಾಗಿದೆ. ಪಕ್ಷಕ್ಕಿಂತ ನಮಗೆ ದೊಡ್ಡವರು ಯಾರು ಇಲ್ಲ ಎಂದು ಹೇಳಿದರು.

ಪಕ್ಷಕ್ಕೆ ನಿಷ್ಟಾವಂತ ಕಾರ್ಯಕರ್ತರ ಅನುವಾರ್ಯತೆ ಇದೆ ಹೊರತು ಇಂತಹ ನಾಯಕರ ಅನುವಾರ್ಯತೆ ಇಲ್ಲ. ಪಕ್ಷ ಜಿ.ಟಿ ದೇವೇಗೌಡರಿಗೆ ಎಲ್ಲಾ ಅಧಿಕಾರ ಕೊಟ್ಟಿತ್ತು. ಆದರೆ ಅವರು ಪಕ್ಷಕ್ಕೆ ಮೋಸ ಮಾಡಿದರು. ಈ ಕಾರಣ ಈ ಭಾಗದಲ್ಲಿ ಸಾಮೂಹಿಕ ನಾಯಕತ್ವ ಕಟ್ಟಿಕೊಂಡಿದ್ದೇವೆ ಎಂದು ಸಾ.ರಾ.ಮಹೇಶ್ ಹೇಳಿದರು. ನಾಳೆ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ಇದೆ. ಈ ಕಾರಣ ದೊಡ್ಡ ದೇವೇಗೌಡರಿಗೆ ಹೋಗಿ ಹುಟ್ಟಿದ ಹಬ್ಬಕ್ಮಿಂತ ಮುಂಚೆಯೇ ಶುಭಾಶಯ ತಿಳಿಸಿದ್ದಾರೆ. ಈ ಎಲ್ಲಾ ತಂತ್ರಗಳು ನಮಗೆ ಅರ್ಥವಾಗುತ್ತದೆ ಎಂದರು.


Asianet News 1 hour ago
Home Flash News