Select Location
All Locations
State
Region
City / District
ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?

ಯಶವಂತಪುರ-ಗದಗ ಬೈಪಾಸ್-ವಿಜಯಪುರ ರೈಲಿಗೆ ವಿರೋಧ; 500 ರೂಪಾಯಿ ಯಾರ್ ಕೊಡ್ತಾರೆ ಸ್ವಾಮಿ?

ಬೆಂಗಳೂರು-ವಿಜಯಪುರ ನಡುವೆ ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದ್ದು, ಇದು ವಿಜಯಪುರ ಜನರಿಗೆ ಸಂತಸ ತಂದಿದೆ. ಆದರೆ, ಈ ರೈಲು ಗದಗ ನಗರವನ್ನು ಪ್ರವೇಶಿಸದ ಕಾರಣ ಅಲ್ಲಿನ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಗುಮ್ಮಟ ನಗರಿ ವಿಜಯಪುರ ಜನತೆಯ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಬೆಂಗಳೂರು-ವಿಜಯಪುರ ನಡುವೆ ಹುಬ್ಬಳ್ಳಿ-ಗದಗ ಬೈಪಾಸ್ ಮೂಲಕ ಹೊಸ ವಿಶೇಷ ರೈಲು ಸೇವೆ ಆರಂಭವಾಗಿದೆ. ಇದೀಗ ಈ ರೈಲಿಗೆ ಗದಗ ಜನತೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಿಂದಲೂ ಬೈಪಾಸ್ ಮೂಲಕ ರೈಲು ಸಂಚಾರಕ್ಕೆ ಗದಗ ಜನತೆ ಬೇಸರ ವ್ಯಕ್ತಪಡಿಸಿಕೊಂಡು ಬರುತ್ತಿದ್ದಾರೆ. ಈ ಬೇಸರಕ್ಕೆ ಗದಗ ಜನತೆ ತಮ್ಮದೇ ಆದ ಕೆಲವು ಕಾರಣಗಳನ್ನು ನೀಡುತ್ತಾರೆ.

ನಮ್ಮ ಗದಗ ಜನತೆ ಗದಗ ಬೈಪಾಸ್ ರೈಲು ನಿಲ್ದಾಣ ತಲುಪಲು 300 ರೂಪಾಯಿ ಅಟೋ ಚಾರ್ಜ್ ಭರಿಸಬೆಕು , ಗದಗ ಜನೆತೆಗೆ ಅವಕಾಶ ವಂಚನೆ ಮಾಡಿದ ನೈಋತ್ಯ ರೈಲ್ವೆಯ ಅಧಿಕಾರಿಗಳು , ಇದರ ಬಗ್ಗೆ ಶಾಸಕರು ಹಾಗೂ ಸಂಸದರು ಈಗಲಾದರೂ ಗದಗ್ ಜನತೆಯ ಬಗ್ಗೆ ಧ್ವನಿ ಎತ್ತಿ ಗದಗ ಜನತೆಯ ಋಣ ತೀರಿಸಿ ಎಂದು ಆಗ್ರಹಿಸಿದ್ದಾರೆ. ಈ ಟ್ವೀಟ್‌ನನ್ನು ಸಂಸದರಾ ಬಸವರಾಜ್ ಬೊಮ್ಮಾಯಿ ಮತ್ತು ಸಚಿವ ಹೆಚ್‌.ಕೆ.ಪಾಟೀಲ್‌ ಅವರಿಗೆ ಟ್ಯಾಗ್ ಮಾಡಲಾಗಿದೆ.

ವೈರಲ್ ಆಗಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಶೋಕ್ ಹಳ್ಳೂರು ಎಂಬವರು, ಸಾಹುಕಾರ್, ಈ ಟ್ರೈನ್ ಗೆ ಬರಬೇಕು ಅಂತ ನಿಮಗ್ಯಾಕೆ ಹಠ? ಬೇರೆ ಟ್ರೈನ್ ಹತ್ತಿ ಬರ್ರೀ, ಹತ್ತು ಹನ್ನೆರಡು ಟ್ರೈನ್ ಇದ್ರೂ ವಿಜಾಪುರ ಗಾಡಿನೇ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಗದಗ ಕಣಗಿನಹಾಳು ನಡುವೆ ಒಂದು ಬೈಪಾಸ್ ರೈಲು ಹಳಿ ಹೊಂಬಾಳ ರೈಲು ನಿಲ್ದಾಣಕ್ಕೆ ಹೊಸದಾಗಿ ನಿರ್ಮಾಣ ಮಾಡಿದ್ರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಆದರೆ ಇವರುಗಳು ಅದನ್ನು ಕೇಳುವುದನ್ನು ಬಿಟ್ಟು ಪ್ರತಿ ಸಾರಿ ಏಕೆ ಗದಗ್ ಬೈಪಾಸ್ ಮೂಲಕ ಟ್ರೈನ್ ಗಳು ಹೋಗುತ್ತದೆ ಎಂದು ಬಡಿದಾಡುತ್ತಾರೆ ಎಂದು ಮತ್ತೋರ್ವ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.


Asianet News 48 minutes ago
Home Flash News