Select Location
All Locations
State
Region
City / District
ನೀತಿ ಸಂಹಿತೆ ಉಲ್ಲಂಘನೆ: ಹಾರ್ದಿಕ್ ಪಾಂಡ್ಯಗೆ ಕಠಿಣ ದಂಡ ವಿಧಿಸಿದ ಬಿಸಿಸಿಐ

ನೀತಿ ಸಂಹಿತೆ ಉಲ್ಲಂಘನೆ: ಹಾರ್ದಿಕ್ ಪಾಂಡ್ಯಗೆ ಕಠಿಣ ದಂಡ ವಿಧಿಸಿದ ಬಿಸಿಸಿಐ

ಕೋಲ್ಕತ್ತಾ: ಐಪಿಎಲ್ 2026 ರ ಬುಧವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ದಂಡ ವಿಧಿಸಲಾಗಿದೆ. ಹಾರ್ದಿಕ್‌ ಪಾಂಡ್ಯ ಅವರಿಗೆ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಯಿತು. ಕೆಕೆಆರ್ ಇನ್ನಿಂಗ್ಸ್‌ನ 10 ನೇ ಓವರ್‌ನಲ್ಲಿ ಹಾರ್ದಿಕ್ ತನ್ನ ರನ್-ಅಪ್‌ಗೆ ಹಿಂತಿರುಗುವಾಗ ಬಲವಂತವಾಗಿ ವಿಕೆಟ್‌ನ ಬೇಲ್‌ಗಳನ್ನು ಕೆಡವಿದ ಘಟನೆ ಸಂಭಂದಿಸಿ ಹಾರ್ದಿಕ್‌ ಗೆ ದಂಡ ವಿಧಿಸಲಾಗಿದೆ. ಅವರು ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿದ್ದಾರೆ ಎಂದು ಕಂಡುಬಂದಿದೆ, ಇದು "ಪಂದ್ಯದ ಸಮಯದಲ್ಲಿ ಕ್ರಿಕೆಟ್ ಉಪಕರಣಗಳು ಅಥವಾ ಬಟ್ಟೆ, ನೆಲದ ಉಪಕರಣಗಳು ಅಥವಾ ಫಿಕ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳ ದುರುಪಯೋಗ"ಕ್ಕೆ ಸಂಬಂಧಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 13 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿರುವ ಮುಂಬೈ ಇಂಡಿಯನ್ಸ್‌ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈಗಾಗಲೇ ಪ್ಲೇ ಆಫ್‌ ರೇಸ್‌ ನಿಂದ ಹೊರಬಿದ್ದಿರುವ ಮುಂಬೈ ತಂಡವು ಕೊನೆಯ ಪಂದ್ಯದಲ್ಲಿ ರಾಜಸ್ತಾನ ತಂಡವನ್ನು ಎದುರಿಸಲಿದೆ.


Udayavani 7 hours ago
Home Flash News