Asian U20 Athletics:19 ಪದಕ ಗೆದ್ದು ಇತಿಹಾಸ ಬರೆದ ಭಾರತ; ಕ್ರೀಡಾಪಟುಗಳಿಗೆ ಮೋದಿ ಅಭಿನಂದನೆ
ನವದೆಹಲಿ: ಹಾಂಗ್ ಕಾಂಗ್‌ನಲ್ಲಿ ನಡೆದ 22ನೇ ಏಷ್ಯನ್ ಯು-20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 10 ಚಿನ್ನದ ಪದಕಗಳು ಸೇರಿದಂತೆ ಒಟ್ಟು 19 ಪದಕಗಳನ್ನು ಮುಡಿಗೇರಿಸಿಕೊಂಡ ಭಾರತೀಯ ಕ್ರೀಡಾಪಟುಗಳ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಯುವ ಅಥ್ಲೀಟ್‌ಗಳ ಈ ಅತ್ಯುತ್ತಮ ಪ್ರದರ್ಶನವು ಅವರ ದೃಢಸಂಕಲ್ಪ ಮತ್ತು ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "10 ಚಿನ್ನ ಸೇರಿದಂತೆ 19 ಪದಕಗಳನ್ನು ಗೆದ್ದ ಭಾರತೀಯ ತಂಡಕ್ಕೆ ಅಭಿನಂದನೆಗಳು. ಈ ಅತ್ಯುತ್ತಮ ಪ್ರದರ್ಶನವು ನಮ್ಮ ಯುವ ಅಥ್ಲೀಟ್‌ಗಳ ಪ್ರತಿಭೆಯನ್ನು ತೋರಿಸುತ್ತದೆ. ಈ ಸಾಧನೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಯುವ ಭಾರತೀಯರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ" ಎಂದು ಹಾರೈಸಿದ್ದಾರೆ. ಭಾರತದ ಪದಕಗಳ ಬೇಟೆ: