Select Location
All Locations
State
Region
City / District
ಹಿರಿಯ ನಿರ್ಮಾಪಕ, ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ

ಹಿರಿಯ ನಿರ್ಮಾಪಕ, ಸಿಬಿಎಫ್‌ಸಿ ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ ನಿಧನ

ಮುಂಬೈ: ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಮಾಜಿ ಅಧ್ಯಕ್ಷ ಪಹ್ಲಾಜ್ ನಿಹಲಾನಿ (Pahlaj Nihalani) ಅವರು ಗುರುವಾರ (ಜೂ.04) ಮುಂಬೈನಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಪಹ್ಲಾಜ್ ನಿಹಲಾನಿ ಅವರು ಗುರುವಾರ ಬೆಳಿಗ್ಗೆ 9:30 ಕ್ಕೆ ಅವರು ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು ಎಂದು ವರದಿಯಾಗಿತ್ತು. ಗುರುವಾರ ಮಧ್ಯಾಹ್ನ 3 ಗಂಟೆಗೆ ಮುಂಬೈನ ಸಾಂತಾ ಕ್ರೂಜ್‌ನಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. "ಜೂನ್ 4, 2026 ರಂದು ನಮ್ಮ ಪ್ರೀತಿಯ ಪಹ್ಲಾಜ್ ನಿಹಲಾನಿ ಅವರು ನಿಧನರಾದ ಸುದ್ದಿಯನ್ನು ತೀವ್ರ ದುಃಖದಿಂದ ತಿಳಿಸುತ್ತಿದ್ದೇವೆ. ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3 ಗಂಟೆಗೆ ಸಾಂತಾಕ್ರೂಜ್ ಹಿಂದೂ ಸ್ಮಶಾನದಲ್ಲಿ ನಡೆಯಲಿದೆ. ಅಂತಿಮ ವಿದಾಯ ಹೇಳುವಾಗ ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳಿಗೆ ನಾವು ಕೃತಜ್ಞರಾಗಿರುತ್ತೇವೆ" ಎಂದು ಕುಟುಂಬದ ಹೇಳಿಕೆ ತಿಳಿಸಿದೆ.

ಪಹ್ಲಜ್ ನಿಹಲಾನಿ ಅವರು ದಶಕಗಳಿಂದ ಹಿಂದಿ ಚಲನಚಿತ್ರೋದ್ಯಮದಲ್ಲಿ ಪರಿಚಿತ ಹೆಸರಾಗಿದ್ದು, ಚಲನಚಿತ್ರ ನಿರ್ಮಾಪಕರಾಗಿ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಿಹಲಾನಿ 1980 ರ ದಶಕದ ಆರಂಭದಲ್ಲಿ ಚಲನಚಿತ್ರ ನಿರ್ಮಾಪಕರಾಗಿ ತಮ್ಮ ಪ್ರಯಾಣ ಪ್ರಾರಂಭಿಸಿದರು. ಅವರ ಮೊದಲ ನಿರ್ಮಾಣದ ಚಿತ್ರ ʼಹಾತ್ಕಡಿʼ 1982 ರಲ್ಲಿ ಬಿಡುಗಡೆಯಾಯಿತು, ನಂತರ 1985 ರಲ್ಲಿ ʼಆಂಧಿ-ತೂಫಾನ್ʼ ಬಿಡುಗಡೆಯಾಯಿತು. 1986 ರಲ್ಲಿ ಗೋವಿಂದ ನಟಿಸಿದ ʼಇಲ್ಜಾಮ್ʼ ಚಿತ್ರವನ್ನು ನಿರ್ಮಿಸಿದ್ದು, ಒಂದು ವರ್ಷದ ನಂತರ, ಅವರು ಆಗ್ ಹಿ ಆಗ್ ಚಿತ್ರವನ್ನು ನಿರ್ಮಿಸಿದರು, ಇದು ಚಂಕಿ ಪಾಂಡೆಯನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿತು. ವರ್ಷಗಳ ಕಾಲ, ನಿಹಲಾನಿ ಅವರು ʼಗುಣಹೋಂ ಕಾ ಫೈಸ್ಲಾʼ, ʼಪಾಪ್ ಕಿ ದುನಿಯಾʼ, ʼಮಿಟ್ಟಿ ಔರ್ ಸೋನಾʼ, ʼಶೋಲಾ ಔರ್ ಶಬ್ನಮ್ʼ ಮತ್ತು ʼಆಂಖೇನ್ʼ ಸೇರಿದಂತೆ ಹಲವಾರು ವಾಣಿಜ್ಯ ಮನರಂಜನಾ ಚಿತ್ರಗಳನ್ನು ನಿರ್ಮಿಸಿದ್ದರು.


Udayavani 1 hour ago
Home Flash News