Select Location
All Locations
State
Region
City / District
ಜಾಗತಿಕ ಹೂಡಿಕೆದಾರರ ಹಾಟ್‌ಸ್ಪಾಟ್ ಕರ್ನಾಟಕಕ್ಕೆ 2ನೇ ಸ್ಥಾನ, ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.18 ಏರಿಕೆ!

ಜಾಗತಿಕ ಹೂಡಿಕೆದಾರರ ಹಾಟ್‌ಸ್ಪಾಟ್ ಕರ್ನಾಟಕಕ್ಕೆ 2ನೇ ಸ್ಥಾನ, ಭಾರತದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.18 ಏರಿಕೆ!

ನವದೆಹಲಿ: ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ (FDI) ಭಾರತವು ಅತ್ಯಾಕರ್ಷಕ ಪ್ರಗತಿಯನ್ನು ಸಾಧಿಸಿವೆ. ಕೇಂದ್ರ ಸರ್ಕಾರದ ಕೈಗಾರಿಕಾ ಉತ್ತೇಜನಾ ಮತ್ತು ಆಂತರಿಕ ವ್ಯಾಪಾರ ಇಲಾಖೆಯು (DPIIT) ಬಿಡುಗಡೆ ಮಾಡಿರುವ ವಾರ್ಷಿಕ ವರದಿಯ ಪ್ರಕಾರ, ಭಾರತಕ್ಕೆ 5.58 ಲಕ್ಷ ಕೋಟಿ ರು. ಬಂಡವಾಳ ಹರಿದು ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.18ರಷ್ಟು ಏರಿಕೆಯಾಗಿದೆ. ವಿದೇಶಿ ನೇರ ಹೂಡಿಕೆಯ ಇಕ್ವಿಟಿ ಒಳಹರಿವಿನಲ್ಲಿ ಕರ್ನಾಟಕ ರಾಜ್ಯವು ಬರೋಬ್ಬರಿ ₹1.22 ಲಕ್ಷ ಕೋಟಿ ಅಂದರೆ 12.93 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು, ಎಫ್‌ಡಿಐ ಸ್ವೀಕರಿಸಿದ್ದು ಈ ಮೂಲಕ ದೇಶದಲ್ಲೇ ಮತ್ತೊಮ್ಮೆ ಎರಡನೇ ಸ್ಥಾನ ಪಡೆದು ಅತ್ಯಧಿಕ ಹೂಡಿಕೆದಾರ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೇಶದ ಒಟ್ಟು ವಿದೇಶಿ ಹೂಡಿಕೆಯಲ್ಲಿ ಸಿಂಹಪಾಲು ಪಡೆದಿರುವ ಮಹಾರಾಷ್ಟ್ರ ವು ₹1.76 ಲಕ್ಷ ಕೋಟಿ ಅಂದರೆ 18.41 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯೊಂದಿಗೆ ಈ ಬಾರಿಯೂ ಮೊದಲ ಸ್ಥಾನದಲ್ಲಿದೆ. ಕೈಗಾರಿಕಾ ವಲಯದಲ್ಲಿ ಮುಂಚೂಣಿಯಲ್ಲಿರುವ ಗುಜರಾತ್ ರಾಜ್ಯವು ₹54,000 ಕೋಟಿ ಅಂದರೆ 5.71 ಬಿಲಿಯನ್ ಅಮೆರಿಕನ್ ಡಾಲರ್ ಎಫ್‌ಡಿಐನೊಂದಿಗೆ 3ನೇ ಸ್ಥಾನದಲ್ಲಿದೆ. ತಾಂತ್ರಿಕ ರಾಜಧಾನಿ ಬೆಂಗಳೂರಿನ ಭದ್ರವಾದ ತಳಹದಿ ಹಾಗೂ ರಾಜ್ಯ ಸರ್ಕಾರದ ಉದ್ಯಮಸ್ನೇಹಿ ನೀತಿಗಳ ಕಾರಣದಿಂದಾಗಿ ಕರ್ನಾಟಕವು 3ನೇ ಸ್ಥಾನದಲ್ಲಿರುವ ಗುಜರಾತ್‌ಗಿಂತ ದುಪ್ಪಟ್ಟಿಗಿಂತಲೂ ಹೆಚ್ಚಿನ ಹೂಡಿಕೆಯನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.


Asianet News 1 hour ago
Home Flash News