ಪ್ರಜಾವಾಣಿ ಚರ್ಚೆ: ಮತ್ತೊಂದು ರಾಜಕೀಯ ಕ್ರಾಂತಿಗೆ ಮುನ್ನುಡಿ ಬರೀತಾರಾ ‘ಅಣ್ಣಾ’?
ಬಿಜೆಪಿ ತೊರೆದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಈಗ ಹೊಸ ರಾಜಕೀಯ ಜನಾಂದೋಲನ ನಡೆಸುವ ಕುರಿತು ಮಾತನಾಡಿದ್ದಾರೆ. ಹಾಗಾದರೆ ಅವರ ಮುಂದಿನ ಹಾದಿಯೇನು ಎನ್ನುವ ಬಗ್ಗೆ ಚರ್ಚೆ ಇಲ್ಲಿದೆ. ಅಣ್ಣಾಮಲೈ ಅವರ ಹೋರಾಟದ ಶಕ್ತಿಯು, ಯುವ ರಾಜಕಾರಣಿಗಳಿಗೆ ಒಂದು ಮಾದರಿ ಎನಿಸಿತ್ತು. ಕರ್ನಾಟಕ ಬಿಜೆಪಿಯಲ್ಲಿ ಅಣ್ಣಾಮಲೈ ರೀತಿಯ ನಾಯಕರೇ ಇಲ್ಲವಲ್ಲ ಎನ್ನುವ ಬೇಸರವಾಗುತ್ತಿತ್ತು. ಆದರೀಗ ಅಂತಹ ಹೋರಾಟದ ಹಿನ್ನೆಲೆಯ ಜನ ನಾಯಕ ಬಿಜೆಪಿಯಿಂದ ಹೊರಬಂದಿದ್ದಾರೆ. ಮೋದಿಯನ್ನು ಹೊಗಳಿಕೊಂಡೇ ಬಂದಿದ್ದ ಅಣ್ಣಾಮಲೈ, ಈಗ ಮೋದಿ ಸಾಗಿದ ದಾರಿಯಲ್ಲೇ ಈಜಲು ಹೊರಟಿದ್ದಾರೆ ಎನಿಸುತ್ತಿದೆ.
ಕಳೆದ ಆರು ತಿಂಗಳಿಂದ ತಮಿಳುನಾಡು ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣದಲ್ಲಿ ನರಳುತ್ತಿದ್ದ ಕೆ. ಅಣ್ಣಾಮಲೈ, ಕೊನೆಗೂ ಬಿಜೆಪಿಯಿಂದ ಹೊರಬಂದು ಹೊಸ ಪಕ್ಷವೊಂದನ್ನು ಆರಂಭಿಸುತ್ತಿರುವುದು ಅವರ ಅಪಾರ ಅಭಿಮಾನಿಗಳಿಗೆ ಸಂತಸ ತಂದಿದೆ.