Select Location
All Locations
State
Region
City / District
Karnataka Politics: ರಾಮಲಿಂಗಾರೆಡ್ಡಿಗೆ ಈ 2 ಖಾತೆ ಆಫರ್​ ಕೊಟ್ಟ ಸುರ್ಜೇವಾಲ! ಕಾಂಗ್ರೆಸ್​​ನಲ್ಲಿ ಬಿಗ್​ ಟ್ವಿಸ್ಟ್​

Karnataka Politics: ರಾಮಲಿಂಗಾರೆಡ್ಡಿಗೆ ಈ 2 ಖಾತೆ ಆಫರ್​ ಕೊಟ್ಟ ಸುರ್ಜೇವಾಲ! ಕಾಂಗ್ರೆಸ್​​ನಲ್ಲಿ ಬಿಗ್​ ಟ್ವಿಸ್ಟ್​

ಕರ್ನಾಟಕ ರಾಜಕೀಯ (Karnataka Politics) ಮತ್ತಷ್ಟು ಅಚ್ಚರಿ ಬೆಳವಣಿಗೆಗಳು ನಡೆಯುತ್ತಿದೆ. ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ನಿನ್ನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಎಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ಇದೀಗ ಅವರಿಗೆ ಪಕ್ಷದ ನಾಯಕರಿಂದ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಪ್ರಮುಖ ಆಫರ್ ಬಂದಿದೆಯೆಂಬ ಮಾಹಿತಿ ಹೊರಬಂದಿದೆ. ಪಕ್ಷದ ಉನ್ನತ ನಾಯಕತ್ವದ ಪರವಾಗಿ ಸುರ್ಜೆವಾಲ ಅವರು ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾಗಿ ಮನವೊಲಿಕೆ ಯತ್ನಿ ಮಾಡಿದ್ದಾರೆ.

ರಾಮಲಿಂಗಾರೆಡ್ಡಿಯನ್ನು ಭೇಟಿಯಾದ ಸುರ್ಜೇವಾಲ ಮನವೊಲಿಸಲು ಯತ್ನಿಸಿದ್ದು ಅಲ್ಲದೇ, ಅವರಿಗೆ ಎರಡು ಮಹತ್ವದ ಖಾತೆಗಳನ್ನು ನೀಡುವ ಪ್ರಸ್ತಾವನ್ನು ಮಾಡಿಕೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ರಾಮಲಿಂಗಾರೆಡ್ಡಿ ಜೊತೆ ಮಾತುಕತೆ ನಡೆಸಿದ ಸುರ್ಜೇವಾಲ! ಮಾಹಿತಿ ಪ್ರಕಾರ, ಸುರ್ಜೆವಾಲ ಅವರು ರಾಮಲಿಂಗಾರೆಡ್ಡಿ ಅವರಿಗೆ ರಾಜೀನಾಮೆ ವಾಪಾಸ್​​ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಸಹಕಾರ ಮತ್ತು ಮುಜರಾಯಿ ಎಂಬ ಎರಡೂ ಇಲಾಖೆಗಳ ಸಚಿವ ಸ್ಥಾನವನ್ನು ಒಟ್ಟಿಗೇ ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆ. ‘ನಿಮ್ಮ ಹಿರಿತನ, ಪ್ರಾಮಾಣಿಕತೆ, ಪಕ್ಷನಿಷ್ಠೆ ನಮಗೆ ಗೊತ್ತಿದೆ. ನಿಮ್ಮನ್ನ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷಕ್ಕೆ ನಿಮ್ಮ ಅಗತ್ಯ ಇದೆ. ಎರಡು ಖಾತೆ ಪಡೆದು ಸಹಕರಿಸಿ’ ಎಂದು ಸುರ್ಜೆವಾಲ ಅವರು ಮನವೊಲಿಸುವ ರೀತಿಯಲ್ಲಿ ಹೇಳಿದ್ದಾರೆ ಎಂಬ ಮಾಹಿತಿ ಬಂದಿದೆ.


News18 Kannada 1 hour ago
Home Flash News