Select Location
All Locations
State
Region
City / District
ಚೆಸ್ ಚಾಂಪಿಯನ್ ಪ್ರಜ್ಞಾನಂದ ಜೊತೆ ಚೆಸ್ ಆಡಿ 50 ಲಕ್ಷ ರೂ. ಕೊಟ್ಟ ವಿಜಯ್

ಚೆಸ್ ಚಾಂಪಿಯನ್ ಪ್ರಜ್ಞಾನಂದ ಜೊತೆ ಚೆಸ್ ಆಡಿ 50 ಲಕ್ಷ ರೂ. ಕೊಟ್ಟ ವಿಜಯ್

ನಟ, ತಮಿಳುನಾಡು ಸಿಎಂ ದಳಪತಿ ವಿಜಯ್ ಅವರು ಭಾರತದ ಚೆಸ್ ಮಾಸ್ಟರ್ ಆರ್​. ಪ್ರಜ್ಞಾನಂದ ಅವರನ್ನು ಸನ್ಮಾನಿಸಿ, ನಾರ್ವೆ ಚೆಸ್ 2026 ಚಾಂಪಿಯನ್ ಆದ ಗೌರವಾರ್ಥವಾಗಿ 50 ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ. ಈ ವೇಳೆ ವಿಜಯ್ ಅವರು ಪ್ರಜ್ಞಾನಂದ ಜೊತೆ ಚೆಸ್ ಆಡಿದ್ದು, ಪ್ರಜ್ಞಾನಂದ ಅವರ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಪ್ರಜ್ಞಾನಂದ ಅವರ ಸಾಧನೆಗೆ ದೊರೆತ ದೊಡ್ಡ ಪ್ರೋತ್ಸಾಹವಾಗಿದೆ.

ಸಿಎಂ ವಿಜಯ್ ಅವರನ್ನು ಭೇಟಿ ಮಾಡಿದ ವಿಷಯವನ್ನು ಪ್ರಜ್ಞಾನಂದ ಅವರು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ‘ನನಗೆ ಚೆಸ್ ಬೋರ್ಡ್ ಜೊತೆ ಬರಲು ಹೇಳಲಾಗಿತ್ತು. ನಾನು ಸಿಎಂ ಜೊತೆ ಚೆಸ್ ಆಡಿದೆ. ಅವರು ನನ್ನ ಜೊತೆ ಚೆಸ್ ಆಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. 15 ನಿಮಿಷಗಳ ಕಾಲ ಚೆಸ್ ಆಡಿದೆವು. ಗೆದ್ದಿದ್ದು ನಾನೇ. ಅವರು ತುಂಬಾನೇ ಪ್ರೋತ್ಸಾಹದಾಯಕವಾಗಿದ್ದಾರೆ’ ಎಂದಿದ್ದಾರೆ ವಿಜಯ್.


TV9 Kannada 1 hour ago
Home Flash News