Select Location
All Locations
State
Region
City / District
Kajja Tulu Movie: ಜೂನ್ 11ರಂದು ʼಕಜ್ಜʼ ತುಳು ಸಿನಿಮಾ ತೆರೆಗೆ

Kajja Tulu Movie: ಜೂನ್ 11ರಂದು ʼಕಜ್ಜʼ ತುಳು ಸಿನಿಮಾ ತೆರೆಗೆ

ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿಷ್ಣು ಎಸ್ ಮೆನನ್ ಮತ್ತು ಸಿದ್ಧಾರ್ಥ್ ಶೆಟ್ಟಿ ನಿರ್ದೇಶನ, ನಿಶಾಂತ್ ಮೆನೆಜಸ್ ನಿರ್ಮಾಣ, ಪ್ರವೀಣ್ ಸುವರ್ಣ ಸಹ ನಿರ್ಮಾಣದಲ್ಲಿ ತಯಾರಾದ "ಕಜ್ಜ" ತುಳು ಸಿನಿಮಾ ಜೂನ್ 11 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಕಜ್ಜ ತುಳು ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರಿ, ಉಡುಪಿ, ಮಣಿಪಾಲ, ಕಾರ್ಕಳ, ಕುಂದಾಪುರ, ಬೆಳ್ತಂಗಡಿ, ಸುಳ್ಯ, ಮುಡಿಪು ಮೊದಲಾದ ಕಡೆಗಳಲ್ಲಿ ತೆರೆಕಾಣಲಿದೆ. "ಕಜ್ಜ" ಎಂದರೆ ತುಳುವಿನಲ್ಲಿ ಕಾರ್ಯ ಎಂದರ್ಥ. ಒಂದೊಳ್ಳೆಯ ಕಾರ್ಯವನ್ನು ಮಾಡಲು ನಾವೆಲ್ಲ ಒಂದಾಗಿದ್ದೇವೆ. ಹಿಂದಿನ ಸಿನಿಮಾ 'ತುಡರ್' ಸಿನಿಮಾಗೆ ಕೊಟ್ಟಷ್ಟೇ ಪ್ರೋತ್ಸಾಹ ಪ್ರೀತಿಯನ್ನು ಈ ಬಾರಿಯೂ ಕಜ್ಜ ಸಿನಿಮಾಗೂ ನೀಡಿ ಎಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ಸಿದ್ಧಾರ್ಥ್ ಶೆಟ್ಟಿ ತಿಳಿಸಿದರು. ಚಿತ್ರತಂಡವು ಈಗಾಗಲೇ ಪುತ್ತೂರು, ಉಡುಪಿ, ಮಂಗಳೂರಿನಲ್ಲಿ ಪ್ರೀಮಿಯರ್‌ ಶೋಗಳನ್ನು ನಡೆಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ʼಕಜ್ಜʼ ಸಿನಿಮಾದಲ್ಲಿ ಸಿದ್ಧಾರ್ಥ್ ಶೆಟ್ಟಿ, ಅರವಿಂದ ಬೋಳಾರ್, ವಸಿಷ್ಠ ಸಿಂಹ, ಉಮೇಶ್ ಮಿಜಾರ್, ಸಂತೋಷ್ ಶೆಟ್ಟಿ, ಜಯಶೀಲಾ, ಉದಯ ಪೂಜಾರಿ, ಶ್ವೇತಾ ಕೋಟ್ಯಾನ್, ಸಹನಾ ಸುಧಾಕರ್, ವೆನ್ನಿಟಾ ಡಯಾಸ್, ಮೋಹನ್ ರಾಜ್, ಗೌತಮ್ ಬಂಗೇರ, ಪ್ರಜ್ವಲ್, ಬಂಬ್ರಾಣ, ಸುವರ್ಣ ಪೂಜಾರಿ, ಸವಿತಾ ಅಂಚನ್, ಶಾಹಿನ್ ಶೇಖ್, ಸನ್ನಿಧಿ ಶೆಟ್ಟಿ, ಪ್ರಜ್ವಲ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಲಿಕಿತ್‌ ಪ್ರಸಾದ್‌ ಶೆಟ್ಟಿ ಸಂಗೀತ ನೀಡಿದ್ದು, ಚಂದು ಮೆಪ್ಪಯೂರ್ ಕ್ಯಾಮರಾ ಕೈಚಳಕವಿದ್ದು, ಬಿನು ನೆಪೋಲಿಯನ್ ಸಂಕಲನ ಮಾಡಿದ್ದಾರೆ. ನೃತ್ಯ ಸಂಯೋಜನೆ ವಿಜೇತ್ ಆರ್ ನಾಯಕ್, ಸಾಹಸ ನಿರ್ದೇಶನ ಯೋಗಾನಂದ್ ಅವರಿದ್ದಿದೆ.


Udayavani 1 hour ago
Home Flash News