Select Location
All Locations
State
Region
City / District
ಭಾರತದ ಹೆಮ್ಮೆಯನ್ನು ಮರುಸ್ಥಾಪಿಸಿದ ಮೋದಿ ಅವರ 12 ವರ್ಷಗಳ ಆಡಳಿತ: ಅಮಿತ್ ಶಾ ಶ್ಲಾಘನೆ

ಭಾರತದ ಹೆಮ್ಮೆಯನ್ನು ಮರುಸ್ಥಾಪಿಸಿದ ಮೋದಿ ಅವರ 12 ವರ್ಷಗಳ ಆಡಳಿತ: ಅಮಿತ್ ಶಾ ಶ್ಲಾಘನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತವು ಭಾರತದ ಹೆಮ್ಮೆಯನ್ನು ಮರುಸ್ಥಾಪಿಸುವ, ಸಾಂಸ್ಕೃತಿಕ ಪುನರುತ್ಥಾನದ ಮತ್ತು ದೇಶವನ್ನು ದಾಸ್ಯದ ಮನಸ್ಥಿತಿಯಿಂದ ಮುಕ್ತಗೊಳಿಸುವ ಐತಿಹಾಸಿಕ ಕಾಲಘಟ್ಟವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ತಿಳಿಸಿದ್ದಾರೆ. ದೇಶದ ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಶಾ, "ನವ ಭಾರತವು ಇಂದು ಜಾಗತಿಕ ವೇದಿಕೆಯಲ್ಲಿ ತನ್ನದೇ ಆದ ಬಲಿಷ್ಠ ಗುರುತನ್ನು ಸ್ಥಾಪಿಸುತ್ತಿದ್ದು, ಜಗತ್ತು ಸಮರ್ಥ ಹಾಗೂ ಶಕ್ತಿಶಾಲಿ ಭಾರತದ ಉದಯವನ್ನು ವೀಕ್ಷಿಸುತ್ತಿದೆ" ಎಂದಿದ್ದಾರೆ. 12 ವರ್ಷಗಳ ಸಾಧನೆಯ ಮೈಲಿಗಲ್ಲುಗಳು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಹಿಂದಿ ಭಾಷೆಯಲ್ಲಿ ಮೋದಿ ಸರ್ಕಾರದ ಪ್ರಮುಖ ಸಾಧನೆಗಳನ್ನು ಪಟ್ಟಿ ಮಾಡಿರುವ ಅಮಿತ್ ಶಾ, ಪ್ರಮುಖ ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಉಲ್ಲೇಖಿಸಿದ್ದಾರೆ: ನೆಹರು ದಾಖಲೆ ಬ್ರೇಕ್: ಸತತ ಮೂರನೇ ಅವಧಿಗೆ ಅಧಿಕಾರದಲ್ಲಿರುವ ನರೇಂದ್ರ ಮೋದಿ ಅವರು ಬುಧವಾರದಂದು ಭಾರತದ ಅತಿ ದೀರ್ಘಾವಧಿ ಚುನಾಯಿತ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ 4,398 ದಿನಗಳ ಅಧಿಕಾರಾವಧಿಯ ದಾಖಲೆಯನ್ನು ಮೋದಿ ಮುರಿದಿದ್ದಾರೆ.


Udayavani 1 hour ago
Home Flash News