ದೇವಸ್ಥಾನಕ್ಕೆ ಭೇಟಿ ನೀಡುವ ಹಕ್ಕು ನನಗಿದೆ: ಕೇರಳ ಸಿಎಂ
ತಿರುವನಂತಪುರ: ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಎದುರಾಗಿರುವ ಮೃದು ಹಿಂದುತ್ವ ಧೋರಣೆ ಆರೋಪದ ಬಗ್ಗೆ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಜಾಣ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ. ದೇಗುಲಕ್ಕೆ ಭೇಟಿ ನೀಡುವುದು ತನ್ನ ವೈಯಕ್ತಿಕ ಹಾಗೂ ಸಾಂವಿಧಾನಿಕ ಹಕ್ಕು ಎಂದು ಪ್ರತಿಪಾದಿಸಿರುವ ಸತೀಶನ್, ‘ಕಳೆದ 37 ವರ್ಷಗಳಿಂದ ಮೂಕಾಂಬಿಕೆಯ ಭಕ್ತನಾಗಿದ್ದು, ಮುಖ್ಯಮಂತ್ರಿಯಾದ ನಂತರ ಕೊಲ್ಲೂರಿಗೆ ಹೋಗದಿದ್ದರೆ ತಪ್ಪಾಗುತ್ತಿತ್ತು. ಇದನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳುವೆ’ ಎಂದು ವಿರೋಧಿಗಳ ಟೀಕೆಗೆ ಉತ್ತರಿಸಿದ್ದಾರೆ.