Select Location
All Locations
State
Region
City / District
ಭಲೇ ಬಟ್ಲರ್… ವಿಶ್ವ ದಾಖಲೆಯೇ ಧೂಳೀಪಟ!

ಭಲೇ ಬಟ್ಲರ್… ವಿಶ್ವ ದಾಖಲೆಯೇ ಧೂಳೀಪಟ!

Jos Buttler World Record: ಇಂಗ್ಲೆಂಡ್ ತಂಡದ ಬ್ಯಾಟರ್ ಜೋಸ್ ಬಟ್ಲರ್, ವೆಸ್ಟ್ ಇಂಡೀಸ್‌ನ ದಿಗ್ಗಜ ಕೀರನ್ ಪೊಲಾರ್ಡ್​ ಅವರ ವಿಶ್ವದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ದಾಂಡಿಗ ಜೋಸ್ ಬಟ್ಲರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಕೀರನ್ ಪೊಲಾರ್ಡ್ ಹೆಸರಿನಲ್ಲಿದ್ದ ಭರ್ಜರಿ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ. ಈ ದಾಖಲೆಯೊಂದಿಗೆ ಬಟ್ಲರ್ ಟಿ20 ರನ್​ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. 

ದಿ ಹಂಡ್ರೆಡ್ ಲೀಗ್​ನ 21ನೇ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದ ಜೋಸ್ ಬಟ್ಲರ್ 20 ಎಸೆತಗಳಲ್ಲಿ 51 ರನ್ ಬಾರಿಸಿದ್ದರು. ಈ ಐವತ್ತೊಂದು ರನ್​ಗಳೊಂದಿಗೆ ಬಟ್ಲರ್ ತಮ್ಮ ಟಿ20 ರನ್​ಗಳ ಸಂಖ್ಯೆಯನ್ನು 14833 ಕ್ಕೇರಿಸಿದ್ದಾರೆ. ಈ ಮೂಲಕ ಪೊಲಾರ್ಡ್​ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದಿದ್ದಾರೆ. 

ಟಿ20 ಕ್ರಿಕೆಟ್​ನಲ್ಲಿ ಈವರೆಗೆ 663 ಇನಿಂಗ್ಸ್ ಆಡಿರುವ ಕೀರನ್ ಪೊಲಾರ್ಡ್ 9802 ಎಸೆತಗಳಲ್ಲಿ 14803 ರನ್ ಕಲೆಹಾಕಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿಯುವಲ್ಲಿ ಬಟ್ಲರ್ ಯಶಸ್ವಿಯಾಗಿದ್ದಾರೆ.

ಚುಟುಕು ಕ್ರಿಕೆಟ್​ನಲ್ಲಿ ಈವರೆಗೆ 492 ಇನಿಂಗ್ಸ್ ಆಡಿರುವ ಜೋಸ್ ಬಟ್ಲರ್ 10074 ಎಸೆತಗಳಲ್ಲಿ 14833 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 

ಜೋಸ್ ಬಟ್ಲರ್ ಇನ್ನು 167 ರನ್​ ಕಲೆಹಾಕಿದರೆ, ಟಿ20 ಕ್ರಿಕೆಟ್​ನಲ್ಲಿ 15,000 ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಅತ್ತ ಬಟ್ಲರ್ ಜೊತೆ ಪೊಲಾರ್ಡ್ ಕೂಡ ರೇಸ್​ನಲ್ಲಿದ್ದು, ಹೀಗಾಗಿ ಇವರಿಬ್ಬರಲ್ಲಿ ಯಾರು ಮೊದಲಿಗೆ 15 ಸಾವಿರ ರನ್​ಗಳ ಗಡಿದಾಟಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 


TV9 Kannada 1 hour ago
Home Flash News