ಮಹಿಳಾ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಯುವತಿಯರು 2ನೇ ಬಾರಿಗೆ ಟ್ರೋಫಿ ಗೆದ್ದು ಇತಿಹಾಸ ಬರೆದಿದ್ದಾರೆ. ಸತತ 3ನೇ ಫೈನಲ್ನಲ್ಲಿ ಸೋಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ಗೆ ದೊಡ್ಡ ಮುಖಭಂಗ ಅನುಭವಿಸಿದೆ. ಫೈನಲ್ನಲ್ಲಿ ಮತ್ತೆ ಸೋತಿದ್ದಕ್ಕೆ ಡೆಲ್ಲಿ ಆಟಗಾರ್ತಿಯರು ಕಣ್ಣೀರು ಹಾಕಿದ್ದಾರೆ. ಈ ಎಲ್ಲದರ ಮಧ್ಯೆ ಗೆದ್ದ ತಂಡಕ್ಕೆ ಬಿಸಿಸಿಐ ಎಷ್ಟು ಹಣ ಘೋಷಣೆ ಮಾಡುತ್ತದೆ?. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪ್ಟನ್ ಮೆಗ್ ಲ್ಯಾನಿಂಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಆಗಮಿಸಿದ ಮುಂಬೈ ಇಂಡಿಯನ್ಸ್ ಓಪನರ್ ವಿಫಲ ಬ್ಯಾಟಿಂಗ್ ಮಾಡಿದರು. ಆದರೆ ನಾಯಕಿ ಹರ್ಮನ್ ಪ್ರೀತ್ ಕೌರ್ 66 ಹಾಗೂ ನ್ಯಾಟ್ ಸಿವರ್-ಬ್ರಂಟ್ 30 ರನ್ಗಳ ನೆರವಿನಿಂದ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ಗೆ ಕೇವಲ 149 ರನ್ ಮಾತ್ರ ಗಳಿಸಿತ್ತು. ಈ ಸುಲಭ ಟಾರ್ಗೆಟ್ ಬೆನ್ನು ಬಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ನಲ್ಲಿ ಭಾರೀ ಹಿನ್ನಡೆ ಅನುಭವಿಸಿ, ಗುರಿ ಮುಟ್ಟಲಾಗಲಿಲ್ಲ. 9 ವಿಕೆಟ್ಗೆ 141 ರನ್ ಮಾತ್ರ ಗಳಿಸಿ, ಕೇವಲ 8 ರನ್ನಿಂದ ಟ್ರೋಫಿ ಕೈ ಚೆಲ್ಲಿತು. ಸತತ 3ನೇ ಬಾರಿಗೆ ಫೈನಲ್ಗೆ ಬಂದಿದ್ದ ಡೆಲ್ಲಿ ಯುವತಿಯರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಇದರಿಂದ ಎಲ್ಲ ಆಟಗಾರ್ತಿಯರು ಬೇಸರದಲ್ಲೇ ಮೈದಾನದಿಂದ ಹೊರ ನಡೆದರು.
WPL 2025 ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್.. ಎಷ್ಟು ಕೋಟಿ ರೂಪಾಯಿ ಬಹುಮಾನ ಸಿಗುತ್ತೆ?
Source : Smacy News
17 hours ago