ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನ, ಭೂತಾನ್ ಸೇರಿ 41 ದೇಶಗಳಿಗೆ ನೀಡುವ ವೀಸಾ ಮೇಲೆ ಕೆಲವು ನಿರ್ಬಂಧ ಹೇರುವ ಸಾಧ್ಯತೆ ಇದೆ.ವಾಷಿಂಗ್ಟನ್ (ಮಾ.16): ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ತನ್ನ ಭದ್ರತೆ ದೃಷ್ಟಿಯಿಂದ ಪಾಕಿಸ್ತಾನ, ಭೂತಾನ್ ಸೇರಿ 41 ದೇಶಗಳಿಗೆ ನೀಡುವ ವೀಸಾ ಮೇಲೆ ಕೆಲವು ನಿರ್ಬಂಧ ಹೇರುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿ ಕೆಲ ಮುಸ್ಲಿಂ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ಹೇರಿದ್ದರು. ಇದೀಗ 41 ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ಹೇರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಟ್ರಂಪ್ ಆಡಳಿತವು ನಿರ್ಬಂಧ ಹೇರಲು ಉದ್ದೇಶಿಸಿರುವ ಈ 41 ದೇಶಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದೆ. ಮೊದಲ ಗುಂಪಿನಲ್ಲಿ ಅಫ್ಘಾನಿಸ್ತಾನ, ಇರಾನ್, ಸಿರಿಯಾ, ಕ್ಯೂಬಾ, ಉತ್ತರ ಕೊರಿಯಾ ಸೇರಿ 10 ದೇಶಗಳಿವೆ. ಈ ದೇಶಗಳಿಗೆ ಅಮೆರಿಕದ ವೀಸಾವನ್ನು ಸಂಪೂರ್ಣವಾಗಿ ರದ್ದು ಮಾಡಲಾಗುವುದು.ಎರಡನೇ ಗುಂಪಿನಲ್ಲಿ ಎರಿಟ್ರಿಯಾ, ಹೈಟಿ, ಲಾವೋಸ್, ಮ್ಯಾನ್ಸಾರ್ ಮತ್ತು ದಕ್ಷಿಣ ಸುಡಾನ್ ದೇಶಗಳಿದ್ದು, ಕೆಲ ವಿನಾಯ್ತಿಗಳೊಂದಿಗೆ ಪ್ರವಾಸಿ, ಶೈಕ್ಷಣಿಕ ಸೇರಿ ಇತರೆ ವಲಸೆ ವೀಸಾಗಳ ಮೇಲೆ ನಿರ್ಬಂಧ ಹೇರಲಾಗುವುದು
ಪಾಕಿಸ್ತಾನ ಸೇರಿ 41 ದೇಶಕ್ಕೆ ಅಮೆರಿಕ ವೀಸಾ ನಿರ್ಬಂಧ?
Source : Smacy News
17 hours ago