2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬೋನಸ್ ಅಂಕ ನೀಡುವ ಬಗ್ಗೆ ಐಸಿಸಿ ಚಿಂತನೆ ನಡೆಸುತ್ತಿದೆ. ಇನ್ನಿಂಗ್ಸ್ ಗೆಲುವು, ದೊಡ್ಡ ಅಂತರದ ಗೆಲುವು, ಬಲಿಷ್ಠ ತಂಡಗಳ ವಿರುದ್ಧದ ಗೆಲುವಿಗೆ ಬೋನಸ್ ಅಂಕ ನೀಡುವ ಸಾಧ್ಯತೆ ಇದೆ. ನವದೆಹಲಿ: 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಬೋನಸ್ ಅಂಕಗಳನ್ನು ನೀಡುವ ಐಸಿಸಿ ಚಿಂತನೆ ನಡೆಸುತ್ತಿದೆ. ಏಪ್ರಿಲ್‌ನಲ್ಲಿ ಮಂಡಳಿ ಸಭೆ ನಡೆಯಲಿದ್ದು, ಇದರಲ್ಲಿ ಹೊಸ ನಿಯಮ ಜಾರಿ ಬಗ್ಗೆ ಚರ್ಚೆಯಾಗಲಿದೆ ಎಂದು ವರದಿಯಾಗಿದೆ, ಸದ್ಯ ಒಂದು ಟೆಸ್ಟ್‌ನಲ್ಲಿ ಕಡಿಮೆ ಅಥವಾ ಬೃಹತ್ ಅಂತರದಲ್ಲಿ ಗೆದ್ದರೂ ಆ ತಂಡಕ್ಕೆ 12 ಅಂಕ ಸಿಗುತ್ತಿದೆ. ಟೈ ಆದರೆ 6, ಡ್ರಾ ಆದರೆ 4 ಅಂಕ ಲಭಿಸುತ್ತಿದೆ. ಆದರೆ ಇನ್ನು ಮುಂದೆ ಇನ್ನಿಂಗ್ಸ್ ಗೆಲುವು ಹಾಗೂ 100 ರನ್‌ಗಿಂತ ಹೆಚ್ಚಿನ ಅಂತರದಲ್ಲಿ ಗೆದ್ದರೆ ಹೆಚ್ಚುವರಿ ಅಂಕ ನೀಡಲು ಐಸಿಸಿ ಮುಂದಾಗಿದೆ. ಜೊತೆಗೆ, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಕೆಲ ಬಲಿಷ್ಠ ತಂಡಗಳ ವಿರುದ್ಧ ಗೆಲ್ಲುವ ತಂಡಗಳಿಗೆ ಹಾಗೂ ತವರಿನಾಚೆ ಜಯಗಳಿಸುವ ತಂಡಗಳಿಗೂ ಬೋನಸ್ ಅಂಕ ನೀಡುವ ಬಗ್ಗೆ ಗಂಭೀರ ಚಿಂತೆ ನಡೆಸಿದೆ. ಇನ್ನು, ಸಭೆಯಲ್ಲಿ 2 ದರ್ಜೆಯಲ್ಲಿ ಟೆಸ್ಟ್ ಸರಣಿಗಳನ್ನು ಆಡಿಸುವ ಬಗ್ಗೆಯೂ ಐಸಿಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್: ತಂಡಗಳಿಗೆ ಬೋನಸ್ ಅಂಕ?
Source : Smacy News
1 month ago